ಬಾಗಲಕೋಟೆ : ಸ್ನಾನಕ್ಕೆ ಎಂದು ಮನೆಯ ಹಿಂದೆ ಇದ್ದ ಹಿತ್ತಲಿಗೆ ಹೋಗಿದ್ದ ಮಹಿಳೆ ಕೊಲೆಯಾದ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯಾಗಿದ್ದು. ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಭೀಮಪ್ಪ ಮಾಂಗ್ ಎಂಬಾತ ಸ್ವಂತ ಚಿಕ್ಕಮ್ಮನನ್ನೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಏನಿದು ಘಟನೆ ?
ಮನೆಯ ಹಿತ್ತಲಿಗೆ ಸ್ನಾನಕ್ಕೆಂದು ತೆರಳಿದ್ದ ಮಹಿಳೆ ಶೋಭಾ ಮಾಂಗ್ ಎಂಬಾಕೆಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಮಹಿಳೆ ಸಾವನ್ನಪ್ಪಿದ್ದಳು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಜಮಖಂಡಿ ಪೊಲೀಸರು ಆರೋಪಿಯನ್ನು ಹುಡುಕಲು ಆರಂಭಿಸಿದ್ದರು.
ಇದನ್ನೂ ಓದಿ :ಡಿನ್ನರ್ ಪಾಲಿಟಿಕ್ಸ್ ನಡುವೆ ಟೆಂಪಲ್ ರನ್ ಕೈಗೊಂಡ ಡಿಕೆಶಿ : ನಾಳೆ ತಮಿಳುನಾಡಿಗೆ ಭೇಟಿ !
ಮಾಟ-ಮಂತ್ರ ಮಾಡುವ ಕಾರಣಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ !
ಬಾಗಲಕೋಟೆಯ ಮುತ್ತೂರು ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ ಭೀಮಪ್ಪ ಮಾಂಗ್ ಮತ್ತು ಶೋಭಾ ಮಾಂಗ್ ಕುಟುಂಬಸ್ಥರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೊಲೆಯಾದ ಶೋಭಾ ಮಾಟ-ಮಂತ್ರ ಮಾಡುತ್ತಾಳೆ ಎಂಬ ಆರೋಪವು ಇತ್ತು. ಶೋಭಾ ಮಾಂಗ್ ಭೀಮಪ್ಪನ ಕೆಲಸದಲ್ಲಿ ಅಡ್ಡಗಾಲು ಹಾಕುತ್ತಿದ್ದಳು. ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಅನೇಕ ಭಾರಿ ಜಗಳವು ನಡೆದಿತ್ತು.
ಆದರೆ ನಿನ್ನೆ(ಜ.7) ಭೀಮಾ ಮಾಂಗ್ ಮನೆಯ ಮುಂದೆ ನಿಂಬೆಹಣ್ಣು ಬಿದ್ದದ್ದ ಕಾರಣಕ್ಕೆ ಎರಡು ಮನೆಯ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಇದೇ ಜಗಳದಿಂದ ಕುಪಿತನಾಗಿದ್ದ ಭೀಮಾ ಮಾಂಗ್ ಮಹಿಳೆ ಸ್ನಾನಕ್ಕೆ ಹೋಗಿದ್ದ ಸಮಯದಲ್ಲಿ ಭೀಮಾ ಮಾಂಗ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಜಮಖಂಡಿ ಪೊಲೀಸರು ಬಂಧಿಸದ್ದಾರೆ.
ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಒಳಪಡಿಸಿದ್ದಾರೆ ಎಂದು ಬಾಗಲಕೋಟೆ ಎಸ್ಪಿ ಮಾಹಿತಿ ದೊರೆತಿದೆ.