ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆ ಡಿಸಿಎಂ ಡಿ,ಕೆ ಶಿವಕುಮಾರ್ ಟೆಂಪಲ್ ರನ್ ಕೈಗೊಂಡಿದ್ದು. ನಾಳೆ ತಮಿಳುನಾಡಿದ ಪ್ರತ್ಯಂಗೀರಾ ದೇವರ ಮೊರೆ ಹೋಗಲಿದ್ದಾರೆ ಎಂದು ಮಾಹಿತಿ ದೊರತಿದೆ.
ರಾಜ್ಯ ಕಾಂಗ್ರೆಸ್ನಲ್ಲಿಯೂ ಬಣ ಬಡಿದಾತ ಶುರುವಾಗಿದ್ದು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ. ಶಿವಕುಮಾರ್ ಬಣಗಳಿಂದ ಡಿನ್ನರ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ರನ್ನು ಹೇಗಾದರೂ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಪ್ರಯತ್ನಗಳು ನಡೆಯುತ್ತಿವೆ. ಇದರ ನಡುವೆ ಡಿ,ಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ.
ಇದನ್ನೂ ಓದಿ :ಆಸ್ತಿ ವಿಚಾರಕ್ಕೆ ಜಗಳ : ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಭೀಕರ ಕೊ*ಲೆ !
ನಾಳೆ ಬೆಳಿಗ್ಗೆ ತಮಿಳನಾಡಿನ ಕುಂಬಕೋಣಂಗೆ ಭೇಟಿ ನೀಡಲಿರೋ ಡಿಕೆ ಶಿವಕುಮಾರ, ಅಲ್ಲಿ ಪ್ರತ್ಯಂಗೀರಾ ದೇವರು ಮತ್ತು ಕಾಂಚೀಪುರಂನ ವರದರಾಜುಪೆರುಮಾಳ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ದೊರೆತಿದೆ. ದೇವರ ದರ್ಶನವನ್ನು ಪಡೆದು ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಮಾಹಿತಿ ದೊರೆತಿದೆ.