Thursday, January 9, 2025

ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ನೇಮಕ

ಬೆಂಗಳೂರು : ಇಸ್ರೋಗೆ ಹೊಸ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದ್ದು. ವಿ, ನಾರಯಣ್​ ಎಂಬುವವರನ್ನು ಇಸ್ರೋದ ಹೊಸ ಅಧ್ಯಕ್ಷ ಮತ್ತು ಬಾಹ್ಯಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ಅವರು ಇದೇ  ಜನವರಿ 14 ರಂದು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಕೇಂದ್ರ ಸರ್ಕಾರದ ಸಂಪುಟದ ನೇಮಕಾತಿ ಸಮಿತಿಯೂ ಈ ಕುರಿತು ಅಧಿಸೂಚನೆ ಹೊರಡಿಸಿದೆ. ವಿ ನಾರಾಯಣನ್ ಅವರ ನೇಮಕವು ಜನವರಿ 14 ರಿಂದ ಎರಡು ವರ್ಷಗಳ ಅವಧಿಗೆ ಇರುತ್ತದೆ ಎಂದು ಮಾಹಿತಿ ದೊರೆತಿದೆ. ಇವರಿಗೆ ಈ ಕ್ಷೇತ್ರದಲ್ಲಿ ಸುಮಾರು 4 ದಶಕಗಳ ಸುದೀರ್ಘ ಪರಿಣಿತಿ ಇದ್ದು. ಇವರು ಇಸ್ರೋದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಇದನ್ನೂ ಓದಿ :KSRTC ಬಸ್​ ಮತ್ತು ಬೈಕ್​ ನಡುವೆ ಭೀಕರ ಅಪಘಾತ : ಇಬ್ಬರು ಸಾ*ವು !

ವಿ.ನಾರಾಯಣ್​ ಅವರು ರಾಕೆಟ್ ಮತ್ತು ಬಾಹ್ಯಾಕಾಶ ನೌಕೆ ಪ್ರೊಪಲ್ಷನ್ನಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅವರು GSLV Mk Ill ವಾಹನದ C25 ಕ್ರಯೋಜೆನಿಕ್ ಯೋಜನೆಯ ಯೋಜನಾ ನಿರ್ದೇಶಕರಾಗಿಯೋ ಕಾರ್ಯನಿರ್ವಹಿಸಿದ್ದಾರೆ.

ಸೋಮನಾಥ್ 2022ರಲ್ಲಿ ಅಧಿಕಾರವಹಿಸಿಕೊಂಡರು

ಜನವರಿ 2022 ರಲ್ಲಿ, ಎಸ್. ಸೋಮನಾಥ್ ಅವರು ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಎರಡು ವರ್ಷಗಳ ಅವಧಿಗೆ ಅಧಿಕಾರ ವಹಿಸಿಕೊಂಡಿದ್ದ ಇವರ ಅವಧಿಯಲ್ಲಿ ಭಾರತ ಬಾಹ್ಯಾಕಾಶ ಕೇಂದ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಮಾಜಿ ಅಧ್ಯಕ್ಷ ಕೆ.ಶಿವನ್ ಅವರ ಅಧಿಕಾರವಧಿಯಲ್ಲಿ ವಿಫಲವಾಗಿದ್ದ ಚಂದ್ರಯಾನ ಯೋಜನೆ ಇವರ ಅವಧಿಯಲ್ಲಿ ಸಫಲವಾಗಿದೆ.

RELATED ARTICLES

Related Articles

TRENDING ARTICLES