ರಾಯಚೂರು : ಕಾರು ಹಾಗು ಲಾರಿ ನಡುವೆ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆಹಬೂಬನಗರ ಜಿಲ್ಲೆಯ ದೇವರಕದ್ರ ಬಳಿ ನಡೆದಿದೆ. ಈ ದುರ್ಘಟನೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ನಿವಾಸಿಗಳು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ನಾವು ಡಿನ್ನರ್ ಮೀಟಿಂಗ್ ಮಾಡಿದ್ರೆ ಡಿಕೆಶಿಗೆ ಏನ್ರೀ..ನಾವೇನು ಅವರ ಆಸ್ತಿ ಕೇಳ್ತಿದ್ವಾ : ಕೆಎನ್.ರಾಜಣ್ಣ
ಮೃತರನ್ನು ಹಿರಿಯ ಪತ್ರಕರ್ತ ಬಿ.ಎ.ನಂದಿಕೋಲಮಠ (58), ಜಂಗಮಮೂರ್ತಿ ಸ್ವಾಮಿ (65) ಎಂದು ಗುರುತಿಸಲಾಗಿದೆ. ಇನ್ನು ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು. ಗಾಯಾಳುಗಳನ್ನು ಚಿನ್ನಯ್ಯ ತಾತ, ಅಮರೇಶ್, ಮಲ್ಲಣ್ಣ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮೆಹಬೂಬನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು. ನಾಲ್ವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ದೊರೆತಿದೆ.