Thursday, January 9, 2025

ನಾವು ಡಿನ್ನರ್ ಮೀಟಿಂಗ್ ಮಾಡಿದ್ರೆ ಡಿಕೆಶಿಗೆ ಏನ್ರೀ..ನಾವೇನು ಅವರ ಆಸ್ತಿ ಕೇಳ್ತಿದ್ವಾ : ಕೆಎನ್​.ರಾಜಣ್ಣ

ತುಮಕೂರು : ಡಿನ್ನರ್​ ಪಾರ್ಟಿ ಕ್ಯಾನ್ಸಲ್​ ಆದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತನಾಡಿದ ಕೆಎನ್​. ರಾಜಣ್ಣ ‘ ಡಿನ್ನರ್​ ಪಾರ್ಟಿ ಕ್ಯಾನ್ಸಲ್​ ಆಗಿಲ್ಲ, ಕೇವಲ ಅದನ್ನು ಮುಂದೂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ ಹೈಕಮಾಂಡ್ ಮೊನ್ನೆ ನಡೆದಿರೊ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಮಾಡಿಕೊಂಡಿದೆ. ಈ ಗೊಂದಲದ ಮಧ್ಯೆ ಇನ್ನೊಂದು ಗೊಂದಲ ಆಗೋದು ಬೇಡ ಎಂದು ಹೇಳಿದ್ದಾರೆ. ಅದಕ್ಕೆ ಅದನ್ನು ಮುಂದೂಡಿದ್ದೇವೆ. ಈ ವಿಚಾರಕ್ಕೆ ಡಿ.ಕೆ ಶಿವಕುಮಾರ್​ ಬೇಜಾರು ಮಾಡಿಕೊಳ್ಳೋಕೆ ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೀರ ಎಂದು ಹೇಳಿದರು.

ಇದನ್ನೂ ಓದಿ: ದೇವರ ದರ್ಶನಕ್ಕೆ ನಿಂತಿದ್ದವರನ್ನು ಬಟ್ಟೆ ಒಗೆದಂತೆ ಹೊಗೆದ ಆನೆ !

ಪರಿಶಿಷ್ಟ ಸಮುದಾಯದ ಸಮಸ್ಯೆ ಬಗ್ಗೆ ಚರ್ಚಿಸಲು ಸಭೆ ನಡೆಸುತ್ತೇವೆ !

ಪ್ರೀ ಯೂನಿರ್ವಸಿಗಳಲ್ಲಿ ಎಸ್ಪಿಎಸ್ಟಿ ಮಕ್ಕಳಿಗೆ ಹಾಸ್ಟೆಲ್​ಗಳಲ್ಲಿ ಸೀಟು ಸಿಗ್ತಿಲ್ಲ. ಇಂತಹ ವಿಚಾರಗಳ ಬಗ್ಗೆ ನಾವು ಚರ್ಚೆ ಮಾಡಲು ಮಿಟಿಂಗ್ ಕರೆದಿದ್ದೋ, ಆದರೆ ಅದನ್ನು ಮಾಡಬೇಡಿ ಎಂದು ಹೇಳಿದ್ದಾರೆ. ಇವರೆಲ್ಲಾ ಎಸ್ಸಿ ಎಸ್ಟಿಗಳ ವಿರೋಧಿಗಳಾ? ಇವೆಲ್ಲಾ ಬಹಳಷ್ಟು ದಿನ ನಡೆಯೊದಿಲ್ಲ. ಹಾಸ್ಟೆಲ್ ಸೀಟ್ ಸಿಗಲ್ಲ, ಸಣ್ಣಪುಟ್ಟ ಸಾಲ ಮಾಡಿ ಮ್ಯಾನೇಜ್ಮೆಂಟ್ ಕೋಟಾದಲ್ಲಿ ಸೀಟು ತಗೊಂಡವನಿಗೆ ಸ್ಕಾಲರ್ಶಿಪ್ ಇಲ್ಲ. ಇದು ಎಸ್ಸಿಎಸ್ಟಿ ಮಕ್ಕಳ ಜ್ವಲಂತ ಸಮಸ್ಯೆ.ಇಂತಹ ಹತ್ತು ಹಲವಾರು ಸಮಸ್ಯೆಗಳಿವೆ.

ಇಂತಹವುಗಳ ಬಗ್ಗೆ ಚರ್ಚೆ ಮಾಡಲು ಮೀಟಿಂಗ್ ಕರೆದರೆ. ಇದಕ್ಕೆ ರಾಜಕೀಯ ಬಣ್ಣ ಕೊಟ್ಟು ಬಿಟ್ಟು , ಮಾಡ್ಬೇಡಿ ಅಂತ ಹೇಳೊದು ಎಸ್ಸಿಎಸ್ಟಿ ಸಮಾಜಕ್ಕೆ ಮಾಡೊ ಅನ್ಯಾಯವಿದು. ಮುಂದೆ ಮೀಟಿಂಗ್​ ಡೇಟ್​ ಫಿಕ್ಸ್​ ಮಾಡುತ್ತೇವೆ. ಮುಂದಿನ ತಿಂಗಳ 14ನೇ ತಾರೀಕು ಎಂಎಂ ಹಿಲ್ಸ್​ನಲ್ಲಿ ಕ್ಯಾಬಿನೆಟ್ ನಡೆಯುತ್ತೆ. ಅಷ್ಟರೊಳಗೆ ಸಭೆ ಮಾಡುತ್ತೇವೆ. ಇಲ್ಲ ಅಂದ್ರೆ ಕ್ಯಾಬಿನೆಟ್​ ಸಭೆ ಮುಗಿದ ಬಳಿಕ ಸಭೆ ನಡೆಸುತ್ತೇವೆ .

 

RELATED ARTICLES

Related Articles

TRENDING ARTICLES