Thursday, January 9, 2025

ಕಾಡಿನಿಂದ ಹೊರಬಂದ ಕೆಂಪು ಉಗ್ರರು : ಸರ್ಕಾರದ ಮುಂದೆ ಶರಣಾಗಲಿರೋ ನಕ್ಸಲರು !

ಚಿಕ್ಕಮಗಳೂರು : ಇಂದು ಕರ್ನಾಟಕದ ಮೋಸ್ಟ್​​ ವಾಟೆಂಡ್​ ನಕ್ಸಲರು ಶರಣಾಗುತ್ತಿದ್ದು. ಮುಂಡಗಾರು ಲತಾ ಸೇರಿದಂತೆ 6 ಜನ ನಕ್ಸಲರು ಕಾಡಿನಿಂದ ಹೊರಬಂದಿದ್ದಾರೆ. ಇವರು ಶರಣಾಗುವ ಹಿನ್ನಲೆ ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಹೈ ಅರ್ಲಟ್​​ ಘೋಷಣೆ ಮಾಡಿದ್ದು.ಶರಣಾಗುತ್ತಿರುವ ನಕ್ಸಲರ ಮೇಲೆ ರಾಷ್ಟ್ರೀಯ ತನಿಖಾ ದಳವು ಕಣ್ಣಿಟ್ಟಿದೆ.

ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಪಕ್ಕದಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ರಚಿಸಿದ ತಂಡದ ಎದುರು ಎಲ್ಲಾ 6 ನಕ್ಸಲರು ಶರಣಾಗಿದ್ದಾರೆ. ಮುಂಡಗಾರು ಲತಾ, ಸುಂದರಿ ಕತ್ಲೂರು, ವನಜಾಕ್ಷಿ, ಮಾರಪ್ಪ, ಜೀಶು ಸಮಾಜದ ಮುಖ್ಯವಾಹಿನಿಗೆ ಹಾಜರಾಗುತ್ತಿದ್ದಾರೆ. ಶಾಂತಿಗಾಗಿ ವೇದಿಕೆ ತಂಡದಿಂದ ಇವರ ಮನವೊಲಿಸುವ ಕೆಲಸವಾಗಿದೆ.

ಇದನ್ನೂ ಓದಿ:ಮಗನನ್ನು ಶಾಲೆಗೆ ಬಿಡಲು ಹೋದಾಗ ಅಪಘಾತ : ಟ್ರ್ಯಾಕ್ಟರ್​ ಹರಿದು ಬಾಲಕ ಸಾ*ವು !

ನಕ್ಸಲರನ್ನು ಬಾಳೆಹೊನ್ನೂರಿನಿಂದ ನೇರವಾಗಿ ಬೆಂಗಳೂರಿಗೆ ಕರೆತರುತ್ತಿದ್ದು. ಸಂಜೆ ನಾಲ್ಕು ಗಂಟೆ ವೇಳೆ ಮುಖ್ಯಮಂತ್ರಿ ಅಥವಾ ಗೃಹ ಸಚಿವರ ಮುಂದೆ ಶರಣಾಗುವ ಸಾಧ್ಯತೆ ಇದೆ. ನಕ್ಸಲರು ಶರಣಾದ ನಂತರ ಅವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದು. ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES