Wednesday, January 8, 2025

ವಿದ್ಯುತ್​​ ಉತ್ಪಾದನ ಘಟಕದಲ್ಲಿ ಬಾಯ್ಲರ್​ ಸ್ಪೋಟ : ಐವರು ಕಾರ್ಮಿಕರಿಗೆ ಗಂಭೀರ ಗಾಯ !

ರಾಮನಗರ : ನಗರದ ಕೆಪಿಟಿಸಿಎಲ್(KPTCL) ಪವರ್ ಕಾರ್ಪೊರೇಷನ್ ವಿದ್ಯುತ್ ಉತ್ಪಾದನ ಘಟಕದಲ್ಲಿ ಬಾಯ್ಲರ್‌ ಸ್ಪೋಟವಾಗಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಬಿಡದಿಯ ಭೈರಮಂಗಲ ಕ್ರಾಸ್​ನಲ್ಲಿರೋ ವಿಧ್ಯುತ್​​ ಉತ್ಪಾದನ ಘಟಕದಲ್ಲಿ ಅವಘಡ ಸಂಭವಿಸಿದ್ದು. ಬಾಯ್ಲರ್​ಸ್ಪೋಟಗೊಂಡ ಪರಿಣಾಮಕ್ಕೆ ಐವರು ಕಾರ್ಮಿಕರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಅಮಲೇಶ್, ಉಮೇಶ್, ಸಂಟೋನ, ತಕೂನ, ಲಕನ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಬಾಲಕಿ ಸೆಂಟ್ರಿಂಗ್​ ಮರ ಬಿದ್ದು ಸಾವು !

ಗಾಯಾಳು ಕಾರ್ಮಿಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ . ಘಟನಾ ಸ್ಥಳಕ್ಕೆ ಬಿಡದಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES