Wednesday, January 8, 2025

ಚೀನಾದಲ್ಲಿ ಯಾವುದೇ ವೈರಸ್​ ಇಲ್ಲ : ವಿಡಿಯೋ ಮಾಡಿ ಸತ್ಯ ಬಿಚ್ಚಿಟ್ಟ ಕನ್ನಡಿಗ !

ಶೆನ್ಜನ್​ : ಕಳೆದ ಎರಡು ದಿನಗಳಿಂದ ಚೀನಾದಲ್ಲಿ ಹೊಸ HMPV ಎಂಬ ವೈರಸ್​ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದ್ದು. ಸಾಮಾಜಿಕ ಜಾಲತಾಣದಲ್ಲಿಯೂ ಅನೇಕ ವಿಡಿಯೋಗಳು ವೈರಲ್​ ಆಗಿವೆ. ಈ ಕುರಿತು ಅನೇಕ ಜಾಗತಿಕ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ. ಆದರೆ ಈ ಕುರಿತು ಚೀನಾದಲ್ಲಿ ನೆಲೆಸಿರುವ ಕನ್ನಡದ ಯುಟ್ಯೂಬರ ಒಬ್ಬರು ಸ್ಪಷ್ಟನೆ ನೀಡಿದ್ದು. ಚೀನಾದಲ್ಲಿ ಯಾವುದೇ ವೈರಸ್​ ಭಾದೆ ಭಾದಿಸುತ್ತಿಲ್ಲ ಎಂದು ಹೇಳಿದ್ದಾರೆ.

ಕೊರೋನ ರೀತಿಯಲ್ಲಿ ಮತ್ತೊಂದು ವೈರಾಣು ಚೀನಾವನ್ನು ಭಾದಿಸುತ್ತಿದೆ ಎಂಬ ವಿಷಯ ದೇಶದಾದ್ಯಂತ ಭಿತ್ತರವಾಗಿತ್ತು. ಇದರ ಕುರಿತು ಅನೇಕ ಅಂತರ್​ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಭಿತ್ತರಿಸಿದ್ದವು. ಆದರೆ ಇದರ ಕುರಿತು ಚೀನಾದಲ್ಲಿ ನೆಲೆಸಿರುವ Shashi4x Kannada ಎಂಬ ಯೂಟ್ಯೂಬರ್​ ವಿಡಿಯೋ ಮಾಡಿದ್ದು. ಚೀನಾದಲ್ಲಿ ಯಾವುದೇ ವೈರಾಣು ಭಾಧಿಸುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಕೆಂಡವಾದ ಕಲಬುರಗಿ : ಪ್ರತಿಭಟನೆಗೆ ಬಂದ ಬಿಜೆಪಿಯವರಿಗೆ ಕಾಫಿ, ಟೀ ವ್ಯವಸ್ಥೆ ಮಾಡಿದ ಪ್ರಿಯಾಂಕ್​ ಖರ್ಗೆ

ಚೀನಾದ ಶೆನ್ಜನ್​ ಎಂಬ ರಾಜ್ಯದಿಂದ ವಿಡಿಯೋ ಮಾಡಿರುವ ಯೂಟ್ಯೂಬರ್​. ಆಸ್ಪತ್ರೆ ಮುಂಭಾಗದಲ್ಲೆ ವಿಡಿಯೋ ಮಾಡಿದ್ದಾರೆ. ಜೊತೆಗೆ ಮೆಟ್ರೋ ನಿಲ್ದಾಣಗಳು, ಶಾಂಪಿಗ್​ ಸೆಂಟರ್​ಗಳು, ಪ್ರವಾಸಿ ತಾಣಗಳಲ್ಲಿ ವಿಡಿಯೋ ಮಾಡಿದ್ದು. ಆ ಸ್ಥಳಗಳಲ್ಲಿ ಜನರು ಮಾಸ್ಕ್​ ಧರಿಸದೆ ಓಡಾಡುತ್ತಿರುವುದನ್ನು ತೋರಿಸಿದ್ದಾರೆ. ಈ ರೀತಿಯಾಗಿ ಚೀನಾದಲ್ಲಿ ಯಾವುದೇ ಸಾಂಕ್ರಾಮಿಕ ಖಾಯಿಲೆ ಇಲ್ಲ ಎಂದು ಕನ್ನಡದ ಯೂಟ್ಯೂಬರ್​ ಹೇಳಿದ್ದಾರೆ.

ಆದರೆ ಚೀನಾದ ಕೆಲವು ಭಾಗಗಳಲ್ಲಿ ಈ ವೈರಸ್​ ಉಲ್ಬಣವಾಗಿದೆ ಎಂದು ಕೆಲವು ರೋಗಿಗಳು ಚೀನಾದಿಂದಲೆ ಮಾತನಾಡಿದ್ದು. ಚೀನಾದ ಕೆಲವು ಭಾಗಗಳಲ್ಲಿ ಮಾತ್ರ ಈ ವೈರಸ್​ ಇರಬಹುದು ಎಂದು ಸಹ ಕೆಲವರು ವಿಶ್ಲೇಷಿಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES