Wednesday, January 8, 2025

ಅಂಗನವಾಡಿಯ ಮೇಲ್ಚಾವಣಿ ಗಾರೆ ಕುಸಿತ : ಸ್ವಲ್ಪದರಲ್ಲೆ ಪಾರಾದ ಪುಟ್ಟ ಮಕ್ಕಳು !

ಕೋಲಾರ : ಅಂಗನವಾಡಿಯ ಮೇಲ್ಚಾವಣಿಯ ಗಾರೆ ಕುಸಿತವಾಗಿ ಅಂಗನವಾಡಿಯಲ್ಲಿದ್ದ ನಾಲ್ಕು ಮಕ್ಕಳಿಗೆ ಗಾಯವಾಗಿರುವ ಘಟನೆ ಕೋಲಾರದ ಕೆ,ಜಿ.ಎಫ್​ನಲ್ಲಿ ನಡೆದಿದೆ. ಘಟನೆ ಬಗ್ಗೆ ತಿಳಿದ ಬಂಗರಾಪೇಟೆ ಶಾಸಕ ಎ. ನಾರಾಯಣ ಸ್ವಾಮಿ ಸ್ಥಳಕ್ಕೆ ಬಂದು ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಕೋಲಾರದ ಕೆಜಿಎಫ್​ನ ದಾಸರಹಳ್ಳಿ ಗ್ರಾಮದಲ್ಲಿನ ಅಂಗನವಾಡಿಯಲ್ಲಿ ಘಟನೆ ನಡೆದಿದ್ದು. ಅಂಗನವಾಡಿಯ ಮೇಲ್ಚಾವಣಿಯ ಗಾರೆ ಕುಸಿತವಾಗಿ ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು. ಗಾಯಾಳು ಮಕ್ಕಳನ್ನು ಬಂಗಾರಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿಥಿಲ ಕಟ್ಟಡದ ಕುರಿತು ಸಾರ್ವಜನಿಕರಿಂದ ಮನವಿ ಮಾಡಿದ್ದರೂ ಕ್ರಮವಾಗಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ :ಕೈ ಕೊಟ್ಟ ಪ್ರೇಯಸಿ : ಯುವತಿಯ ಮನೆಯರ ಮೇಲೆ ಹಲ್ಲೆ ನಡೆಸಿ ರೈಲಿಗೆ ತಲೆ ಕೊಟ್ಟ ಯುವಕ !

ಘಟನೆ ವಿಷಯ ತಿಳಿಯುತ್ತಿದ್ದಂತೆ ಬಂಗರಾಪೇಟೆ ಶಾಸಕ ಎ.ನಾರಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಕ್ಷೇಮದ ಬಗ್ಗೆ ವಿಚಾರಿಸಿ, ಆಸ್ಪತ್ರೆ ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES