Tuesday, January 7, 2025

ವೈದ್ಯರು ಕ್ಯಾನ್ಸರ್​ ರೋಗಿಗಳಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಬೇಕು : ದ್ರೌಪದಿ ಮುರ್ಮು

ಬೆಳಗಾವಿ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರೂ ಈ ಸಮಾರಂಭದಲ್ಲಿ ಭಾಗವಹಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಕ್ಯಾನ್ಸರ್​ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಿದರು.

ಕ್ಯಾನ್ಸರ್​ ಆಸ್ಪತ್ರೆಯನ್ನು ಉದ್ಘಾಟನೆಎ ಮಾಡಿ ಮಾತನಾಡಿದ ದ್ರೌಪದಿ ಮುರ್ಮು ‘ ಕ್ಯಾನ್ಸರ್​ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗಲಿ. ಕ್ಯಾನ್ಸರ್​ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಸಿಗಬೇಕಿದೆ. ಜಗತ್ತಿನಲ್ಲಿ ಸುಮಾರು 20 ಮಿಲಿಯನ್​ ಕ್ಯಾನ್ಸರ್​ ಕೇಸ್​ಗಳು ಪತ್ತೆಯಾಗುತ್ತಿವೆ. ಸುಮಾರು 9 ಮಿಲಿಯನ್​ ಜನರು ಈ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ.

ಕ್ಯಾನ್ಸರ್​ ರೋಗ ಕೇವಲ ರೋಗಿಗೆ ಮಾತ್ರ ಸಮಸ್ಯೆ ತರಲ್ಲ. ಅದು ಆತನ ಕುಟುಂಬಕ್ಕೂ ಸಂಕಷ್ಟ ತರುತ್ತದೆ. ಅದಕ್ಕೆ ಪ್ರತಿಯೊಬ್ಬ ವೈದ್ಯರು ಕ್ಯಾನ್ಸರ್​ ರೋಗಿಗೆ ವಿಶೇಷ ಕಾಳಜಿಯಿಂದ ಚಿಕಿತ್ಸೆ ನೀಡಬೇಕು. ಭಾರತ ಸರ್ಕಾರ ಕೂಡ ಕ್ಯಾನ್ಸರ್​ ಚಿಕಿತ್ಸೆಯನ್ನು ಗುಣಮಟ್ಟಗೊಳಿಸಲು ಕ್ರಮವಹಿಸಬೇಕು. ಇದಕ್ಕಾಗಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ : ಮೂಡಾ ಇರುವವರೆಗೂ ಸಿಎಂ ಹೆಸರು ಶಾಶ್ವತವಾಗಿರುತ್ತದೆ : ಪ್ರತಾಪ್​ ಸಿಂಹ

ಆಯುಶ್​ಮಾನ್​ ಭಾರತ ಯೋಜನೆಗಳು ಜನಮುಖಿ ಯೋಜನೆಗಳಾಗಿವೆ. ಸಮಾಜದಲ್ಲಿ ಕ್ಯಾನ್ಸರ್​ ರೋಗವನ್ನು ತಡೆಯುವ ಕುರಿತು ಜನಜಾಗೃತಿ ಅವಶ್ಯಕತೆ ಇದೆ. ಇಂತಹ ಮಾರಕ ರೋಗಗಳನ್ನು ಆರಂಭದಲ್ಲಿಯೆ ಪತ್ತೆ ಮಾಡಿ ಚಿಕಿತ್ಸೆ ಕೊಡಿಸುವ ಅವಶ್ಯಕತೆ ಇದೆ. ಕೆಎಲ್​ಇ ಸಂಸ್ಥೆಯ ಕಾರ್ಯ ನನಗೆ ಸಂತೋಶ ತಂದಿದೆ. ನಿಮ್ಮಲ್ಲರಿಗೂ ನಾನು ಶುಭಾಶಯ ತಿಳಿಸುವೆ, ನಿಮ್ಮೆಲ್ಲರ ಭವಿಶ್ಯ ಉಜ್ವಲ ಆಗಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

RELATED ARTICLES

Related Articles

TRENDING ARTICLES