Tuesday, January 7, 2025

ಚೀನಾದಲ್ಲಿ ಹೊಸ HMPV ವೈರಸ್​ ಭೂತ : ವೈರಸ್​ ಕುರಿತು ಹೆಚ್ಚಿನ ಮಾಹಿತಿಗಾಗಿ ವರದಿ ನೋಡಿ !

ಚೀನಾದಲ್ಲಿ ಹೊಸ ರೀತಿಯ ವೈರಸ್​ ಉಗಮ ಇಡೀ ವಿಶ್ವಕ್ಕೆ ಆತಂಕ ಹುಟ್ಟಿಸಿದ್ದು. HMPV ಎಂಬ ವೈರಸ್​ ಹರಡುತ್ತಿದೆ. ಕೇವಲ ಭಾರತದ ಮಾಧ್ಯಮಗಳು ಮಾತ್ರವಲ್ಲದೆ ಜಾಗತಿಕ ಮಾಧ್ಯಮಗಳು ಕೂಡ ಇದರ ಬಗ್ಗೆ ವರದಿ ಮಾಡುತ್ತಿವೆ.

ಚೀನಾದಲ್ಲಿ ಕಳೆದ 5 ವರ್ಷದ ಹಿಂದೆ ಕಾಣಿಸಿಕೊಂಡ ಕೋವಿಡ್​-19 ವೈರಸ್​ ಇಡೀ ಜಗತ್ತಿಕೆ ಕಂಟಕ ಪ್ರಾಯವಾಗಿ ಪರಿಣಮಿಸಿತ್ತು. ಇದರ ಪರಿಣಾಮವಾಗಿ ವಿಶ್ವದಲ್ಲಿ ಕೋಟ್ಯಾಂತರ ಜನರು ಪ್ರಾಣ ಕಳೆದುಕೊಳ್ಳುವಂತಾಯಿತು. ಆದರೆ ಇದೀಗ ಮತ್ತೊಂದು ಆಘಾತಕಾರಿ ವರದಿ ಬಂದಿದ್ದು. ಚೀನಾದಲ್ಲಿ ಮತ್ತೊಂದು ಹೊಸ ವಿದಧ ವೈರಸ್ ಹಾವಳಿ ಇಟ್ಟಿದೆ.

ಈ ಬಾರಿ ಚೀನಾದಲ್ಲಿ ಅನೇಕ ವಿದಧ ವೈರಸ್​ಗಳು ಹಾವಳಿ ಇಟ್ಟಿದ್ದು, ಮೈಕ್ರೋ ಪ್ಲಾಸ್ಮ, ಹ್ಯೂಮನ್​ ಲೆಟಪ್ಲಿನೋ ವೈರಸ್​, ನ್ಯೂಮೋನಿಯಾ, ಕೋವಿಡ್​ 19 ರೀತಿಯ ಅನೇಕ ವೈರಸ್​ಗಳು ಚೀನಿ ಜನರನ್ನು ಭಾಧಿಸುತ್ತಿವೆ. HMPV ವೈರಸ್​ ಉತ್ತರ ಚೀನಾದಲ್ಲಿ ಹೆಚ್ಚು ಆರ್ಭಟಿಸುತ್ತಿದ್ದು. 14 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.

ಇದನ್ನೂ ಓದಿ : ಮೂಡಾ ಇರುವವರೆಗೂ ಸಿಎಂ ಹೆಸರು ಶಾಶ್ವತವಾಗಿರುತ್ತದೆ : ಪ್ರತಾಪ್​ ಸಿಂಹ

2001ರಲ್ಲೆ ಪತ್ತೆಯಾಗಿತ್ತು HMPV ವೈರಸ್​ 

HMPV ವೈರಸ್​ 2001ರಲ್ಲೆ ಪತ್ತೆಯಾಗಿತ್ತು. ಈ ವೈರಸ್​ ಮೊದಲಿಗೆ ಪಕ್ಷಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಸಂಶೋಧನೆಗಳು ಸಾಬೀತು ಪಡಿಸಿವೆ. ಈ ವೈರಸ್​ ಕೂಡ ಕೋವಿಡ್​ ರೀತಿಯಲ್ಲಿ ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡಿದ್ದು. ಸುಮಾರು 3 ರಿಂದ 6 ದಿನಗಳ ಕಾಲ ಗಾಳಿಯಲ್ಲಿ ಜೀವಸಬಲ್ಲದು. ಸೋಂಕಿನ ಹರಡುವಿಕೆ ಹೆಚ್ಚಿದ್ದರೆ ಇನ್ನು ಹೆಚ್ಚಿನ ಸಮಯ ಬದುಕಿರುತ್ತದೆ.

ಈ ವೈರಸ್​​ ಸೋಂಕಿಗೆ ಒಳಗಾದವರಿಗೆ ಕೆಮ್ಮು, ಶೀತ, ಜ್ವರ, ಗಂಟಲು ನೋವಿನಂತಹ ಪ್ರಾರಂಭಿಕ ಲಕ್ಷಣಗಳು ಆರಂಭವಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ನ್ಯೂಮೋನಿಯಾದಂತಹ ಗಂಭೀರಾ ಸ್ವರೂಪದ ಖಾಯಿಲೆಗೂ ಕಾರಣವಾಗುತ್ತದೆ. ಇದಕ್ಕೆ ನಿರ್ಧಿಷ್ಟವಾದ ಯಾವುದೇ ವ್ಯಾಕ್ಸಿನ್​ ಇಲ್ಲಿಯವರೆಗೂ ಕಂಡುಹಿಡಿಯಲಾಗಿಲ್ಲ. ಕೋವಿಡ್​ 19ಕ್ಕೆ ತೆಗೆದುಕೊಳ್ಳುತ್ತಿದ್ದ ಮುನ್ನೆಚರಿಕೆ ಕ್ರಮಗಳನ್ನೆ ಕೈಗೊಂಡು ಈ ಖಾಯಿಲೆಯಿಂದ ಪಾರಾಗಬೇಕಿದೆ ಎಂದು ತಿಳಿದು ಬಂದಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ಹರಿದಾಡುತ್ತಿದ್ದು. ಈ ವಿಡಿಯೋಗಳನ್ನು ಪ್ರಸ್ತುತ ಚೀನಾದಲ್ಲಿರುವ ಪರಿಸ್ಥಿತಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಇವುಗಳ ಸತ್ಯಾ ಸತ್ಯತೆ ಕುರಿತು ಇನ್ನಷ್ಟೆ ಮಾಹಿತಿ ಬರಬೇಕಿದೆ .

 

 

 

RELATED ARTICLES

Related Articles

TRENDING ARTICLES