Tuesday, January 7, 2025

ಇಸಿಜಿ ಚುಚ್ಚುಮದ್ದು ಪಡೆದ ಮಗು ಸಾ*ವು : ವೈದ್ಯರ ಎಡವಟ್ಟು ಎಂದ ಕುಟುಂಬಸ್ಥರು !

ತುಮಕೂರು : ಇಸಿಜಿ ಚುಚ್ಚುಮದ್ದನ್ನು ಪಡೆದ ಎರಡುವರೆ ತಿಂಗಳ ಗಂಡು ಮಗು ಸಾವನ್ನಪ್ಪಿದ್ದು. ವೈದ್ಯರ ಎಡವಟ್ಟಿಗೆ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಕುಟುಂಬಸ್ಥರು ಆರೋಗ್ಯಧಾಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆರೋಗ್ಯ ಇಲಾಖಾದಿಕಾರಿ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : INDvsAUS Test : 185ಕ್ಕೆ ಭಾರತ ಆಲೌಟ್​ , ಮತ್ತೆ ಕೈಕೊಟ್ಟ ಬ್ಯಾಟಿಂಗ್​ ವಿಭಾಗ !

ಚಿಕ್ಕಮ್ಮ ಮತ್ತು ಮುರುಳಿ ದಂಪತಿಯ ಗಂಡು ಮಗುವಿಗೆ ನಿನ್ನೆ (ಜನವರಿ.02) ಕುಣಿಗಲ್ ತಾಲೂಕು ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಸಿಜಿ ಇಂಜೆಕ್ಷನ್‌ ಕೊಡಿಸಲಾಗಿತ್ತು. ಒಟ್ಟಿಗೆ ಮೂರು ಇಂಜೆಕ್ಷನಗಳನ್ನು ಮಗುವಿಗೆ ನೀಡಲಾಗಿತ್ತು. ಇಂಜೆಕ್ಷನನ್ನು ಪಡೆದ ಮಗು ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದು. ವೈದ್ಯರ ಎಡವಟ್ಟಿಗೆ ಮಗು ಸಾವನ್ನಪ್ಪಿದೆ ಎಂದು ಆರೋಪ ಮಾಡಲಾಗಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರೋಗ್ಯ ಇಲಾಖೆಯ ಆರ್​ಸಿಎಚ್​​ ಆಗಮಿಸಿದ್ದು. ಕುಣಿಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

RELATED ARTICLES

Related Articles

TRENDING ARTICLES