Tuesday, January 7, 2025

INDvsAUS Test : 185ಕ್ಕೆ ಭಾರತ ಆಲೌಟ್​ , ಮತ್ತೆ ಕೈಕೊಟ್ಟ ಬ್ಯಾಟಿಂಗ್​ ವಿಭಾಗ !

ಸಿಡ್ನಿ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕೊನೆಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 185 ರನ್​ಗಳಿಗೆ  ಆಲೌಟ್​ ಆಗಿದ್ದು. ಭಾರತದ ಬ್ಯಾಟಿಂಗ್ ವಿಭಾಗ ಮತ್ತೆ ವಿಫಲವಾಗಿದೆ. ಭಾರತದ ಪರ ರಿಷಬ್​ ಪಂತ್​ 40 ರನ್​ ಗಳಿಸಿದ್ದು ಬಿಟ್ಟರೆ. ಇತರೆ ಯಾವ ಆಟಗಾರರು ಉತ್ತಮ ಪ್ರದರ್ಶನ ನೀಡಲಿಲ್ಲ.

ಸಿಡ್ನಿಯಲ್ಲಿ ನಡೆಯುತ್ತಿರುವ ಕೊನೆಯ ಬಾರ್ಡರ್​ ಗವಾಸ್ಕರ್​ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಭಾರತದ ಆರಂಭಿಕ ಆಟಗಾರರು ಹೆಚ್ಚು ಸಮಯ ಸ್ಕ್ರೀಸ್​​ನಲ್ಲಿ ನಿಲ್ಲುವಲ್ಲಿ ವಿಫಲರಾದರು. ಜೈಸ್ವಾಲ್​ (10) ಮತ್ತು ಕನ್ನಡಿಗ ಕೆ,ಎಲ್​ ರಾಹುಲ್​ 4ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಗಿಲ್​ ಮತ್ತು ಕೊಹ್ಲಿ ಕೆಲವು ಸಮಯ ಸ್ಕ್ರೀಸ್​​ನಲ್ಲಿದ್ದರು ಸಹ ಹೆಚ್ಚು ರನ್​ ಗಳಿಸುವಲ್ಲಿ ವಿಫಲರಾದರು.

ಇದನ್ನೂ ಓದಿ ; ನೀರು ಶುದ್ಧೀಕರಣ ಘಟಕದಲ್ಲಿ‌ ಸತ್ತುಬಿದ್ದ ನಾಯಿ : 17 ಗ್ರಾಮದ ಜನರಿಗೆ ವಾಂತಿ ಭೇದಿಯ ಆತಂಕ !

ಭಾರತದ ಪರ ವಿಕೆಟ್​ ಕೀಪರ್ ರಿಷಬ್ ಪಂತ್​ 40 ರನ್​ ಗಳಿಸಿದರೆ. ಜಡೇಜಾ 26ರನ್​ ಗಳಿಸಿ ಔಟಾದರು. ಕಡೆಯಲ್ಲಿ ಬ್ಯಾಟ್​ ಬೀಸಿದ ನಾಯಕ ಜಸ್ಪ್ರೀತ್​ ಬುಮ್ರಾ ಕೇವಲ 17 ಎಸೆತಗಳಲ್ಲಿ 22 ರನ್​ಗಳಿಸಿ ಔಟಾದರು.

ಆಸ್ಟ್ರೇಲಿಯಾ ಪರ ಬೊಲಾಂಡಾ 4 ವಿಕೆಟ್​ ಪಡೆದು ಮಿಂಚಿದರೆ. ಮಿಚಲ್​ ಸ್ಟಾರ್ಕ್ 3 ವಿಕೆಟ್​ ಮತ್ತು ನಾಯಕ ಪ್ಯಾಟ್​ ಕಮಿನ್ಸ್​ 2 ವಿಕೆಟ್​ ಪಡೆದರು.

RELATED ARTICLES

Related Articles

TRENDING ARTICLES