Wednesday, January 8, 2025

ಸಕಾಲಕ್ಕೆ ಸಿಗದ ಚಿಕಿತ್ಸೆ : ಗರ್ಭದಲ್ಲೆ ಸಾವನ್ನಪ್ಪಿದ ಮಗು , ಮಹಿಳೆ ಸ್ಥಿತಿ ಗಂಭೀರ !

ಬೆಳಗಾವಿ : ಇತ್ತೀಚೆಗೆ ರಾಜ್ಯದಲ್ಲಿ ಗರ್ಭಿಣಿಯರ ಸಾವಿನ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಇದರ ನಡುವೆ ಹುಬ್ಬಳ್ಳಿಯ ಕಿಮ್ಸ್​​ ಆಸ್ಪತ್ರೆಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.

ಬೆಳಗಾವಿಯ ಬಿಮ್ಸ್​ ಆಸ್ಪತ್ರೆಗೆ ರಾಧಿಕ ಗಡ್ಡಿಗೋಳಿ ಎಂಬ ಗರ್ಭಿಣಿ ಮಹಿಳೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗೆಂದು ಗರ್ಭಿಣಿ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದರು. ಮಹಿಳೆಯ ಗರ್ಭದಲ್ಲೆ ಮಗು ಸಾವನ್ನಪ್ಪಿದ್ದ ಹಿನ್ನಲೆಯಲ್ಲಿ ಮಹಿಳೆಯನ್ನು ವೆಂಟಿಲೇಟರ್​ ಇದ್ದ ಆ್ಯಂಬುಲೆನ್ಸ್​ನಲ್ಲಿ ಶಿಫ್ಟ್​ ಮಾಡಲಾಗಿತ್ತು.

ಇದನ್ನೂ ಓದು :  ಹೊಸ ವರ್ಷದ ಹೊಸ್ತಿಲಲ್ಲಿ ದರ್ಶನ್​ಗೆ ಬಿಗ್​ ಶಾಕ್​ : ಸುಪ್ರೀಂಕೋರ್ಟ್ ಕದ ತಟ್ಟಿದ ಪೊಲೀಸರು !

ಓರ್ವ ವೈದ್ಯರ ನಿನ್ನೆ ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ಮಹಿಳೆಯನ್ನುತಂಡದೊಂದಿಗೆ ಮಹಿಳೆಯನ್ನು ಕಿಮ್ಸ್​ ಆಸ್ಪತ್ರೆಗೆ ರವಾನೆ ಮಾಡಿದ್ದರು. ಇದೀಗ ಮಗು ಗರ್ಭದಲ್ಲೆ ಸಾವನ್ನಪ್ಪಿದ್ದು. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಹೆರಿಗೆ ವಾರ್ಡ್ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES