Sunday, January 5, 2025

ಸೇನವಾಹನ ಪ್ರಪಾತಕ್ಕೆ ಉರುಳಿ ಅವಘಡ : ಕೊಡಗು ಮೂಲದ ಮತ್ತೊಬ್ಬ ಯೋಧ ಹುತಾತ್ಮ !

ಕೊಡಗು : ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಪ್ರಪಾತಕ್ಕೆ ಬಿದ್ದು ಕರ್ನಾಟಕ ಮೂಲದ 3 ಜನ ಯೋದರು ಹುತಾತ್ಮರಾಗಿದ್ದರು. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದ್ದು. ಮತ್ತೊಬ್ಬ ಕರ್ನಾಟಕ ಮೂಲದ ಸೈನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಡಿಸೆಂಬರ್​ 25ರಂದು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್‌ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ 150 ಅಡಿ ಕಂದಕಕ್ಕೆ ಉರುಳಿ ಕರ್ನಾಟಕ  ಮೂಲದ ಮೂವರು ಸೇರದಂತೆ ಒಟ್ಟು 5 ಜನ ಸಾವಿಗೀಡಾಗಿದ್ದರು. ಅನೇಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೊಬ್ಬ ಕೊಡುಗು ಮೂಲದ ಯೋಧ ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ಇದನ್ನೂ ಓದಿ :2024ರಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಟಾಪ್​ 5 ಹಾಡುಗಳು ಯಾವುವು ಗೊತ್ತೇ ! 

ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್​ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ತಂದೆ, ತಾಯಿಯ ಏಕೈಕ ಮಗನಾಗಿದ್ದ ದಿವಿನ್ ಕಳೆದ 10 ವರ್ಷದಿಂದ ಸೇನೆಯಲ್ಲಿ ಸೇವೆಸಲ್ಲಿಸುತ್ತಿದ್ದರು. ಇತ್ತೀಚೆಗೆ ದಿವಿನ್​ಗೆ ಮದುವೆಯು ನಿಶ್ಚಯವಾಗಿತ್ತು.

ತಾಯಿಯ ಕರೆಗೆ ಕಣ್ಣಿನ ಮೂಲಕವೆ ಸ್ಪಂದಿಸಿದ್ದ ವೀರ ಯೋಧ !

ಕಾಶ್ಮೀರದಲ್ಲಿ ಸೇನಾವಾಹನ ಪ್ರಪಾತಕ್ಕೆ ಬಿದ್ದು ದಿವಿನ್​ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಶಯವನ್ನು ಸೇನಾ ಅಧಿಕಾರಿಗಳು ದಿವಿನ್​​ ತಾಯಿ ಜಯ ಅವರಿಗೆ ತುರ್ತು ಕರೆ ಮಾಡಿ ತಿಳಿಸಿದ್ದರು. ಜಯ ಅವರು ಕೂಡ ಶ್ರೀನಗರದ ಆಸ್ಪತ್ರೆಗೆ ತಲುಪಿದ್ದರು. ತನ್ನ ತಾಯಿಯ ಕರೆಗೆ ದಿವಿನ್​ ಕಣ್ಣಿನ ಮೂಲಕವೆ ಸ್ಪಂದಿಸಿದ್ದರು. ಆದರೆ ದಿವಿನ್​ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾದ ಕಾರಣ ನಿನ್ನೆ ರಾತ್ರಿ ದಿವಿನ್​ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES