Tuesday, December 31, 2024

2024ರಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಟಾಪ್​ 5 ಹಾಡುಗಳು ಯಾವುವು ಗೊತ್ತೇ !

ಸಿನಿಮಾ : 2024ಕ್ಕೆ ಗುಡ್​ಬಾಯ್​ ಹೇಳೋದಕ್ಕೆ ಇನ್ನೇನು ಕೆಲವೆ ದಿನಗಳಿವೆ. ಇದರ ನಡುವೆ ಈ ವರ್ಷ ಸ್ಯಾಂಡಲ್​ ವುಡ್​ನಲ್ಲಿ ಜನರಿಗೆ ಹೆಚ್ಚು ಇಷ್ಟವಾದ ಹಾಡುಗಳು ಯಾವುವು ಎಂದು ನಿಮಗೆ ತಿಳಿದಿದೆಯಾ. ತಿಳಿದಿಲ್ಲದಿದ್ದರೆ ಈ ವರದಿಯನ್ನು ಪೂರ್ತಿ ನೋಡಿ.

ಕನ್ನಡದಲ್ಲಿ ಈ ವರ್ಷ ಬಹಳಷ್ಟು ಹಾಡುಗಳು ಸೌಂಡ್​ ಮಾಡಿವೆ. ಅದರಲ್ಲಿ ಯಾವುದು ಟಾಪ್​ ಐದು ಹಾಡುಗಳ ಅಂತ ಆಯ್ಕೆ ಮಾಡೋದು ಬಹಳ ಕಷ್ಟ ಅಂತಹದ್ರಲ್ಲಿ ಈ ವರ್ಷ ಜನರ ಬಾಯಲ್ಲಿ ಅತೀ ಹೆಚ್ಚು ಗುನುಗಿದ ಮತ್ತು ಸೋಷಿಯಲ್​ ಮಿಡಿಯಾದಲ್ಲಿ ಸೌಂಡ್​ ಮಾಡಿದ, ಆ್ಯಂಡ್​ ಥಿಯೇಟರ್​ನಲ್ಲೂ ಧೂಳೆಬ್ಬಿಸಿದ ಹಾಡುಗಳನ್ನ ನಾವು ಆಯ್ಕೆ ಮಾಡಿಕೊಂಡು ಬಂದಿದ್ದಿವಿ.

ಹಿತ್ತಲಕ್ಕ ಕರೀ ಬ್ಯಾಡ ಮಾವ………

ಪ್ರತೀ ವರ್ಷವೂ ಯೋಗರಾಜ್​ ಭಟ್​ ಬರೆದಿರೋ ಹಾಡುಗಳು ಟಾಪ್​ ಲಿಸ್ಟ್​ನಲ್ಲಿರುತ್ತವೆ ಈ ವರ್ಷವೂ ಕೂಡ ಅವರೇ ಬರೆದ, ಮತ್ತು​ ಅವರೆ ನಿರ್ದೇಶನ ಮಾಡಿದ ಕರಟಕ ದಮನಕ ಸಿನಿಮಾದ ಹಾಡು ಟಾಪ್​ ಫೈವ್​ನಲ್ಲಿದೆ. ಕರಟಕ ದಮನಕ ಸಿನಿಮಾ ‘ಹಿತ್ತಲಕ್ಕ ಕರೀ ಬ್ಯಾಡ ಮಾವ’ ಹಾಡು ಸಖತ್ ಸೌಂಡ್​ ಮಾಡದೆ. ಇದರ ಜೊತೆಗೆ ನಿಶ್ವಿಕಾ ಮತ್ತು ಪ್ರಭುದೇವ ಸ್ಟೇಪ್ಸ್​ ಕೂಡ ಈ ಸಾಂಗ್​ ಹಿಟ್​ ಆಗೋಕೆ ಕಾರಣವಾಗಿದೆ ಎಂದು ಹೇಳಬಹುದು.

ಉಪೇಂದ್ರ ರಚನೆ ಟ್ರೋಲ್​ ಸಾಂಗ್​…….

ಇನ್ನೂ ಇಡೀ ವರ್ಷ ನಮ್ಮನ್ನ ಸಿನಿಮಾಗೆ ಕಾಯೋ ಹಾಗೆ ಮಾಡಿದ ರಿಯಲ್ ಸ್ಟಾರ್​ ಸಿನಿಮಾದ ಹಾಡು ಟಾಪ್​ ನಾಲ್ಕನೇ ಸ್ಥಾನದಲ್ಲಿದೆ. ಈ ಹಾಡಿನ ವಿಶೇಷತೆ ಏನು ಅಂದರೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್​ ಮಾಡಿದ ಎಲ್ಲಾ ಟ್ರೋಲ್​ಗಳನ್ನೇ ಲಿರಿಕ್ಸ್​ ಮಾಡಿಕೊಂಡು ಈ ಸಾಂಗ್​ ರಚಿಸಲಾಗಿದೆ. ಐದು ಭಾಷೆಗಳಲ್ಲಿ ರಿಲೀಸ್​ ಆದ ಈ ಸಾಂಗ್​ ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಗಿದೆ ಏಕೆಂದರೆ ಎಲ್ಲಾ ಭಾಷೆಯಲ್ಲಿ ಅಲ್ಲಿನ ಟ್ರೋಲ್​ ಪದಗಳನ್ನೆ ಬಳಸಿಕೊಂಡು ಸಾಂಗ್​ ರಚಿಸಲಾಗಿದೆ.

ಭೀಮ ಸಿನಿಮಾದ ‘ ಡೋಂಟ್​ ವರಿ ಬೇಬಿ ಚಿನ್ನಮ್ಮ…….

ನಟ ದುನಿಯಾ ವಿಜಯ್​ ಅಭಿನಯದ ಭೀಮ ಸಿನಿಮಾದ ‘ಡೋಂಟ್ ವರಿ ಬೇಬಿ ಚಿನ್ನಮ್ಮ’ ಹಾಡು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಹಾಡಿನ ಜೊತೆಗೆ ಚರಣ್ ರಾಜ್ ಸಂಗೀತದ ಸಾಂಗ್‌ಗೆ ನಾಗಾರ್ಜುನ ಶರ್ಮಾ ಸಾಲುಗಳನ್ನು ಪೋಣಿಸಿದ್ದಾರೆ. ಗಣ ಮುತ್ತು ವಾಯ್ಸ್‌ನಲ್ಲಿ ಸಾಂಗ್ ಕೇಳುಗರ ಗಮನ ಸೆಳೆದಿತ್ತು. ಅದರ ಜೊತೆಗೆ ಬೆಂಗಳೂರು ನಗರದ ಲೋಕಲ್​ ಏರಿಯಾಗಳಲ್ಲಿ ಸಾಂಗ್ ಶೂಟ್​ ಮಾಡಿರುವ ಕಾರಣ ನೋಡುಗರಿಗೆ ಈ ಸಾಂಗ್ ಹೆಚ್ಚು ಕಿಕ್​ ನೀಡಿದೆ.

ಕೃಷ್ಣಂ ಪ್ರಣಯ ಸಖಿಗೆ ದೊರೆತ ಮೊದಲೆರಡು ಸ್ಥಾನಗಳು………

ಕಳೆದ ಕೆಲ ವರ್ಷಗಳಿಂದ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಸಿನಿಮಾಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಆದರೆ ಈ ವರ್ಷ ತೆರೆಕಂಡ ಕೃಷ್ಣಂ ಪ್ರಣಯ ಸಖಿ ಸಿನಿಮಾ ಎಲ್ಲಾ ವರ್ಗದ ಜನರಿಗೂ ಹೆಚ್ಚು ಇಷ್ಟವಾಗಿದ್ದು. ಇದರಲ್ಲಿನ ಹಾಡುಗಳು ಈ ಸಿನಿಮಾಗೆ ಮತ್ತಷ್ಟು ಕಳೆಯನ್ನು ತಂದುಕೊಟ್ಟಿವೆ.

ಹೌದು ಕೃಷ್ಣಂ ಪ್ರಣಯ ಸಖಿ ಸಿನಿಮಾದ ‘ಚಿನ್ನಮ್ಮ..ಚಿನ್ನಮ್ಮ..ನೀ ನನ್ನ ಮುದ್ದು ಗುಮ್ಮ’ ಟಾಪ್​ ಎರಡನೇ ಸ್ಥಾನವನ್ನು ಪಡೆದಿದ್ದು. ಬಿಡುಗಡೆಯಾದ ಒಂದೆ ದಿನಕ್ಕೆ ಮಿಲಿಯನ್​ಗಟ್ಟಲೆ ವ್ಯೂವ್ಸ್​ ಪಡೆದಿತ್ತು. ಅದರ ಜೊತೆಗೆ ಕವಿರಾಜ್​ ಅವರ ಅದ್ಭುತ ಸಾಹಿತ್ಯ ಮತ್ತು ಕೈಲಾಶ್​ ಖೇರ್​ ಮತ್ತು ಇಂದು ನಾಗರಾಜ್​ ಅವರ ಧ್ವನಿ ಈ ಹಾಡಿಗೆ ಮತ್ತಷ್ಟು ಜೀವ ತುಂಬಿತ್ತು.

ದ್ವಾಪರ ಹಾಡಿಗೆ ವರ್ಷದ ಅತ್ಯುತ್ತಮಮ ಸಾಂಗ್ ಪಟ್ಟ…..

ಇನ್ನು 2024ರ ಟಾಪ್ ಒಂದನೇ ಸ್ಥಾನದಲ್ಲಿರುವ​ ಸಾಂಗ್​ ಯಾವುದೆಂದರೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ಧನಿಯೋಳೆ, ಮೀನ ಕಣ್ಣೋಳೆ’ ಹಾಡು ಈ ವರ್ಷ ಜನರಿಗೆ ಹೆಚ್ಚು ಅಚ್ಚುಮೆಚ್ಚಿನ ಹಾಡಾಗಿ ಹೊರಹೊಮ್ಮಿದೆ. ಈ ಹಾಡು ಸಮಾಜಿಕ ಜಾಲತಾಣದ ರೀಲ್ಸ್​ನಲ್ಲಿಯೂ ಕೋಟಿಗಟ್ಟಲೆ ವ್ಯೂಸ್​ ಪಡೆದು ಸೋಷಿಯಲ್​ ಮೀಡಿಯಾವನ್ನೆ ಶೇಕ್​ ಮಾಡಿತ್ತುಬ ಎಂದರೆ ಅತಿಶಯೋಕ್ತಿ ಅಲ್ಲ ಎನ್ನಬಹುದು.

 

ಇನ್ನೇನು 2024ಕ್ಕೆ ಗುಡ್​ಬಾಯ್​ ಹೇಳುವ ಸಮಯ ಹತ್ತಿರವಾಗಿದ್ದು. ಈ ಸಮಯದಲ್ಲಿ ಯಾವೆಲ್ಲ ವಿಚಾರಗಳು ನಮ್ಮ ಮನಸಿಗೆ ಮುದ ನೀಡಿದವು, ಯಾವೆಲ್ಲ ವಿಚಾರಗಳು ನಮಗೆ ನೋವು ನೀಡಿದೆವು ಎಂಬುದನ್ನು ನೆನಪು ಮಾಡಿಕೊಳ್ಳುತ್ತೇವೆ. ಅದೇ ರೀತಿ ಪವರ್​ ಟಿ,ವಿ ಈ ವರ್ಷ ಜನರ ಮನಸಿಗೆ ಹೆಚ್ಚು ಮುದ ನೀಡಿದ ಹಾಡುಗಳನ್ನು ಪವರ್​ ಟಿ,ವಿ ನೆನಪಿಸಿದೆ.

 

 

 

RELATED ARTICLES

Related Articles

TRENDING ARTICLES