ದೇವನಹಳ್ಳಿ : ರಸ್ತೆಯಲ್ಲಿ ವಿಲೀಂಗ್ ಮಾಡುವ ವೇಳೆ ಅಪಘಾತವಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದ್ದು. ಅಪಘಾತ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ದೇವನಹಳ್ಳಿ ತಾಲೂಕಿನ, ವಿಜಯಪುರ ಬಳಿಯಲ್ಲಿನ ಬೈಪಾಸ್ನಲ್ಲಿ ಘಟನೆ ನಡೆದಿದ್ದು. ರಸ್ತೆಯಲ್ಲಿ ಹುಚ್ಚಾಟ ಮೆರೆಯುತ್ತಾ, ತಮ್ಮ ಬೈಕ್ನಲ್ಲಿ ವಿಲೀಂಗ್ ಮಾಡುವ ವೇಳೆ ಎದುರಿಗೆ ಬರುತ್ತಿದ್ದ ಕ್ಯಾಂಟರ್ಗೆ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಇಬ್ಬರು ಯುವಕರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಮೃತ ಯುವಕರನ್ನು 22 ವರ್ಷದ ಅರ್ಪಜ್ ಮತ್ತು 22 ವರ್ಷದ ಮನೋಜ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಬಸ್ : ಓಂ ಶಕ್ತಿಗೆ ಹೋಗುತ್ತಿದ್ದ 42 ಜನರಿಗೆ ಗಾಯ !
ಸ್ಥಳಕ್ಕೆ ವಿಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಯುವಕರ ಮೃತದೇಹಗಳನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.