ಕಝಾಕಿಸ್ತಾನ್ : ಬುಧವಾರ ಕಝಾಕಿಸ್ತಾನದ ಅಕ್ಟೋವ್ ವಿಮಾನ ನಿಲ್ದಾಣದ ಬಳಿ 100 ಕ್ಕೂ ಹೆಚ್ಚು ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ತುರ್ತು ಭೂಸ್ಪರ್ಶ ಮಾಡುವಾಗ ಪತನಗೊಂಡಿದ್ದು ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಕಝಾಕಿಸ್ತಾನ್ ಆರೋಗ್ಯ ಸಚಿವಾಲಯದ ಪ್ರಕಾರ, ಅಪಘಾತದಲ್ಲಿ ಆರು ಜನರು ಬದುಕುಳಿದ್ದಿದ್ದು. ಬಹುತೇಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇದನ್ನು ಓದಿ : 23 ವರ್ಷಗಳ ಹಿಂದೆ ಮನೆ ತೊರೆದ ಮಹಿಳೆ ವಾಪಾಸ್ : ಮನೆಗೆ ಕರೆಸಿ ಸನ್ಮಾನಿಸಿದ ಸಚಿವ ಮಹದೇವಪ್ಪ !
ಅಜರ್‌ಬೈಜಾನ್ ಏರ್‌ಲೈನ್ಸ್ ಫ್ಲೈಟ್ J2-8243 ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ತೆರಳುತ್ತಿತ್ತು, ಆದರೆ ಮಂಜಿನಿಂದಾಗಿ ಮಾರ್ಗವನ್ನು ಬದಲಾಯಿಸಲಾಯಿತು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ. ಕಝಕಿಸ್ತಾನ್ ಮಾಧ್ಯಮಗಳ ಪ್ರಕಾರ, ವಿಮಾನದಲ್ಲಿ 105 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು ಎಂದು ಮಾಹಿತಿ ದೊರೆತಿದೆ.