ಬೆಳಗಾವಿ : ವಿಧಾನ ಪರಿಷತ್ ಸದಸ್ಯ ಸಿ,ಟಿ ರವಿಯನ್ನು ಬಂಧಿಸಿದ್ದ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದು. ಖಾನಾಪುರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ರನ್ನು ಅಮಾನತು ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದ ಪ್ರಕರಣದಲ್ಲಿ ಖಾನಾಪುರ ಪೊಲೀಸರು ಸಿ,ಟಿ ರವಿಯನ್ನು ವಶಕ್ಕೆ ಪಡೆದಿದ್ದರು. ಇದೀಗ ಇದೆ ಪ್ರಕರಣದ ಕಾರಣಕ್ಕೆ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನಾಯಕ್ರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಮತ್ತೊಂದೆಡೆ ಬಿಜೆಪಿ ನಾಯಕರನ್ನು ಠಾಣೆಗೆ ಬಿಟ್ಟು ಸಭೆ ನಡೆಸಲು ಅವಕಾಶ ನೀಡಿದಕ್ಕೆ ಅಮಾನತು ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ : ಕರ್ನಾಟಕ ಮೂಲದ ಮೂವರು ಸೈನಿಕರು ಹುತಾತ್ಮ !
ಒಟ್ಟಾರೆಯಾಗಿ ಐಜಿಪಿ ವಿಕಾಸ್ ಕುಮಾರ್ ಅವರು ಖಾನಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಗೌಡರನ್ನು ಅಮಾನತು ಮಾಡಿದ್ದು. ಪೊಲೀಸ್ ಇಲಾಖೆ ಈ ಕ್ರಮ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದಂತಾಗಿರುವುದಂತು ನಿಜ ಎಂದು ಹೇಳಬಹುದಾಗಿದೆ.