ಬೆಳಗಾವಿ : ಸಿ.ಟಿ ರವಿ ವಿರುದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಡಿದ್ದೆದ್ದಿದ್ದು. ಯಾವುದೇ ಕಾರಣಕ್ಕೂ ಸಿ,ಟಿ ರವಿಯನ್ನು ಕ್ಷಮಿಸುವ ಪ್ರಮೇಯವೇ ಇಲ್ಲ. ಅವರಿಗೆ ಶಿಕ್ಷೆ ಆಗುವವರೆಗೂ ನಾನು ಬಿಡುವುದಿಲ್ಲ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಳ್ಕರ್ ‘ ಸಿ,ಟಿ ರವಿಗೆ ಶಿಕ್ಷೆ ಆಗುವವರೆಗೂ ನಾನು ಬಿಡೋದಿಲ್ಲ. ಇದರ ಕುರಿತು ಸಿಎಂ, ಸಭಾಪತಿ ತನಿಖೆ ನಡೆಸಬೇಕು. ಆದಷ್ಟು ಬೇಗ ಎಫ್.ಎಸ್ಎಲ್ ವರದಿ ತರಿಸಿಕೊಳ್ಳುತ್ತೇವೆ. ಆಗಿರುವ ಘಟನೆ ಬಗ್ಗೆ ಒಬ್ಬರು ಕ್ಷಮೆ ಕೇಳಿಲ್ಲ. ಆದರೆ ಮೆರವಣಿಗೆ ಮಾಡಿಕೊಂಡಿದ್ದಾರೆ. ಗಾಯವಾಗಿದೆ ಎಂದು ಬ್ಯಾಂಡೆಜ್ ಕಟ್ಟಿಕೊಂಡಿದ್ದಾರಲ್ಲಾ, ಎಷ್ಟು ಹೊಲಿಗೆ ಬಿದ್ದಿದೆ ಆತನಿಗೆ ಎಂದು ಸಿ,ಟಿ ರವಿಯ ಮೇಲೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಫುಟ್ಪಾತ್ ಮೇಲೆ ಮಲಗಿದ್ದವರ ಮೇಲೆ ಹರಿದ ಲಾರಿ : ಮೂವರು ಸಾ*ವು !
ಸಿ,ಟಿ ರವಿಯವರು ಆ ಪದವನ್ನು ಬಳಸಿದ್ದಾರೆ. ಇಂತಹ ನೂರು ಸಿ,ಟಿ ರವಿ ಬಂದರೂ ನಾನು ಅವರನ್ನು ಹೆದರಿಸುತ್ತೇನೆ. ನನ್ನ ಬಳಿ ದಾಖಲೆ ಇದೆ ಅದನ್ನು ಇಂದೇ ಬಿಡುಗಡೆ ಮಾಡುತ್ತೇನೆ. ಎನ್ಕೌಂಟರ್ ಮಾಡಲು ಹೊರಟ್ಟಿದ್ದರು ಎಂದು ನಾಟಕ ಮಾಡಿದ್ದೀರಾ. ನಾಚಿಕೆ ಆಗಬೇಕು ನಿಮಗೆ. ಈ ವಿಶಯದಲ್ಲಿ ರಾಜಕಾರಣ ಮಾಡುತ್ತಿದ್ದೀರಾ ಇಡೀ ಕರ್ನಾಟಕ ರಾಜ್ಯದ ಜನರು ನಿಮಗೆ ಛೀಮಾರಿ ಹಾಕಿದ್ದಾರೆ. ಕಾನೂನು ಪ್ರಕಾರ ಪೊಲೀಸರು ಏನು ಮಾಡಬೇಕು ಅದನ್ನು ಮಾಡಿದ್ದಾರೆ.
ಮಾಡೋದನ್ನ ಮಾಡಿ ನಂತರ ದೇವರ ಹತ್ತಿರ ಹೋಗಿ ನಿಂತುಕೊಂಡಿದ್ದೀರಾ. ನಿಮಗೆ ನಾಚಿಕೆ ಆಗಬೇಕು. ಇದರ ವಿರುದ್ದ ನಾನು ಕಾನೂನೂ ಹೋರಾಟ ಮಾಡುತ್ತೇನೆ. ಪ್ರಧಾನಿಗೆ, ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿಯನ್ನು ಭೇಟಿ ಮಾಡುತ್ತೇನೆ. ನನ್ನನ್ನು ರಾಜಕಾರಣದಿಂದ ಹಿಂದಕ್ಕೆ ಸರಿಸಬೇಕು ಎಂದು ಈ ರೀತಿ ಮಾಡಿದ್ದಾರೆ. ಆದರೆ ಅದು ಸಾಧ್ಯವಿಲ್ಲ. ಬಿಜೆಪಿಯಲ್ಲಿರುವ ಎಲ್ಲರು ದೃತರಾಷ್ಟ್ರರೇ ಎಂದು ಹೇಳಿದರು.