Sunday, December 22, 2024

ಸಿ.ಟಿ ರವಿಯ ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿದ್ದರು : ಅರಗ ಜ್ಞಾನೇಂದ್ರ

ಶಿವಮೊಗ್ಗ : ಮಾಜಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಸಿ,ಟಿ ರವಿಯ ಬಂದನದ ಕುರಿತು ಮಾತನಾಡಿದ್ದು. ಪೊಲೀಸರು ಸಿ,ಟಿ ರವಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿದ್ದರು. ಆದರೆ ಮಾಧ್ಯಮದವರು ಇದ್ದ ಕಾರಣ ಇದು ನಡೆಯಲಿಲ್ಲ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮಾತಮಾಡಿದ ಅರಗ ಜ್ಞಾನೇಂದ್ರ ‘ ಸಿ,ಟಿ ರವಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಪೊಲೀಸರು ಸಿ,ಟಿ ರವಿಯನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂಧಿಸಿದ್ದರು. ಠಾಣೆಗೆ ಕರೆದೊಯ್ಯದೆ ರಾತ್ರಿಯಿಡಿ ಹಿಂಸೆ ನೀಡಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಈ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : ಮರ ಕತ್ತರಿಸುವ ಯಂತ್ರ ಮಾರುವ ನೆಪದಲ್ಲಿ ಮನೆಗೆ ಬಂದು ಕೊ*ಲೆ ಮಾಡಿದ ದುರುಳ !

ವಿಧಾನಸಭೆಯಲ್ಲಿ ರಾಷ್ಟ್ರದ್ರೋಹಿ  ಕೂಗು ಕೂಗಿದವರನ್ನು ಬಂಧಿಸದೆ ಕಾಲಹರಣ ಮಾಡಿದರು. ಆದರೆ ಈ ಪ್ರಕರಣದಲ್ಲಿ ಇಷ್ಟೋಂದು ಅರ್ಜೇಂಟ್​ ಏನಿತ್ತು. ಸಿ,ಟಿ ರವಿಯನ್ನು ಬಂಧಿಸಿದ ದಿನ ಮಾಧ್ಯಮದವರು ಅವರನ್ನು ಉಳಿಸಿದ್ದಾರೆ. ಅಂದು ರಾತ್ರಿಯೆಲ್ಲಾ ಪೊಲೀಸರ ಚಲನ ವಲನದ ಬಗ್ಗೆ ಹಿಂಬಾಲಿಸದ್ದಾರೆ. ಸಿ,ಟಿ ರವಿ ಅವರ ಅದೃಷ್ಟ ಗಟ್ಟಿಯಾಗಿದ್ದರಿಂದ ಅವರು ಬದುಕಿ ಬಂದಿದ್ದಾರೆ.

ಕಾಂಗ್ರೆಸ್​ ಸರ್ಕಾರ ಗೂಂಡಾಗಳಿಗೆ ರಕ್ಷಣೆ ನೀಡುತ್ತಿದೆ !

ವಿಧಾನಸಭೆಯ ಒಳಗೆ ಗನ್‌ಮ್ಯಾನ್ ಹಾಗೂ ಶಾಸಕರ ಪಿ.ಎ ಗಳಿಗು ಒಳಗೆ ಬರಲು ಅನುಮತಿ ಇಲ್ಲ. ಆದರೆ ಸಿ,ಟಿ ರವಿಯವರಿಗೆ ವಿಧಾನ ಪರಿಷತ್​ ಒಳಗ ನುಗ್ಗಿ ಹಲ್ಲೆ ಮಾಡಿದ್ದಾರೆ. ಇಲ್ಲಿ ಶಾಸಕರಿಗೆ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯರ ಪರಿಸ್ಥತಿ ಹೇಗಿರಬಹುದು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 19 ತಿಂಗಳೂ ಕಳೆದಿದೆ. ಈ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಎಲ್ಲಿ ನೋಡಿದರು ಲಂಚ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಇನ್ನು ವಾಲ್ಮೀಕಿ ಹಗರಣದಿಂದ ಹೊರಬರಲು ಸಾಧ್ಯವಾಗಿಲ್ಲ. ಸರ್ಕಾರ ಜನರ ಸಾಮಾನ್ಯರ ಬದುಕಿಗೆ ಬೆಂಕಿ ಇಟ್ಟಿದೆ. ಈ ಕೂಡಲೆ ಸರ್ಕಾರ ಸಿ,ಟಿ ರವಿ ಬಂಧನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES