ಬೆಂಗಳೂರು : ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾನೆ ಎಂಬ ಕಾರಣಕ್ಕೆ ಸ್ನೇಹಿತನ ಮರ್ಮಾಂಗವನ್ನೆ ಸುಟ್ಟು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಭೋವಿತಿಮ್ಮನಪಾಳ್ಯದಲ್ಲಿ ನಡೆದಿದ್ದು. ಕೊಲೆಯಾದ ದುರ್ದೈವಿಯನ್ನಿ ಪ್ರದೀಪ್ ಎಂದು ಗುರುತಿಸಲಾಗಿದೆ.
ಭೋವಿತಿಮ್ಮನಪಾಳ್ಯ ನಿವಾಸಿ ಮೃತ ಪ್ರದೀಪ್ ಮದುವೆಯಾಗಿ ಹೆಂಡತಿಯನ್ನು ಬಿಟ್ಟಿದ್ದನು. ಈತನ ಸ್ನೇಹಿತನಾಗಿದ್ದ 30 ವರ್ಷದ ಚೇತನ ಪ್ರದೀಪ್ನನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು. ಆದರೆ ಪ್ರದೀಪ್ಕುಡಿದ ಮತ್ತಿನಲ್ಲಿ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದನು. ಇದೇ ವಿಚಾರಕ್ಕೆ ಡಿಸೆಂಬರ್ 19ರಂದು ಎಣ್ಣೆ ಮತ್ತಿನಲ್ಲಿ ಇಬ್ಬರ ನಡುವೆ ಜಗಳವಾಗಿದ್ದು. ಚೇತನ್ ಪ್ರದೀಪ್ನ ತಲೆಯನ್ನು ಗೋಡೆಗೆ ಹೊಡೆದು. ಸಿಗರೇಟ್ನಿಂದ ಮಮಾಂಗವನ್ನು ಸುಟ್ಟು ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಲಿಂಗ ಕಾಮಕ್ಕೆ ಹತ್ಯೆಯಾಗಿರೋ ಸಾದ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದನ್ನೂ ಓದಿ : ಮರ ಕತ್ತರಿಸುವ ಯಂತ್ರ ಮಾರುವ ನೆಪದಲ್ಲಿ ಮನೆಗೆ ಬಂದು ಕೊ*ಲೆ ಮಾಡಿದ ದುರುಳ !
ಸದ್ಯ ಮಾದನಾಯಕನಹಳ್ಳಿ ಪೊಲೀಸರು ಕೊಲೆ ಆರೋಪಿ ಚೇತನ್ ಎಂಬಾತನನ್ನು ಬಂಧಿಸಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ.