ಶಿವಮೊಗ್ಗ : ಬಿಜೆಪಿಯವರ ಹಣೆಬರಹ ಗೊತ್ತಾಗಿದೆ. ಈ ರಾಜ್ಯದಲ್ಲಿ ಕಾನೂನು ಇದೆ ಎಂದರೆ ಅದಕ್ಕೆ ಸಿ.ಟಿ ರವಿ ಬಂಧನ ಸಾಕ್ಷಿಯಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸೊರಬದಲ್ಲಿ ಮಾತನಾಡಿದ ಅವರು, ಮೊದಲಿನಿಂದಲೂ ಈ ರೀತಿ ಹೇಳಿಕೆ ನೀಡುವ ಕೆಟ್ಟ ಚಾಳಿ ಸಿ.ಟಿ. ರವಿ ಮೇಲೆ ಇದೆ. ಸಂವಿಧಾನ ಮತ್ತು ಮಹಿಳೆಯ ಮೇಲೆ ಅಸಹ್ಯಕರವಾದ ಪದ ಬಳಕೆಯನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಟಿ ರವಿಗೆ ಕಠಿಣ ಶಿಕ್ಷೆ ಕೂಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು, ಒತ್ತಾಯಿಸಿದ್ದಾರೆ.
ಇದನ್ನೂ ಓಧಿ : ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೆ ಸಾ*ವು !
ಡಾ. ಅಂಬೇಡ್ಕರ್ ರವರ ಕುರಿತು ಚರ್ಚೆ ಆಗಬಾರದು ಎಂದು ಸಿ.ಟಿ ರವಿ ಆ ರೀತಿ ವರ್ತನೆ ಮಾಡಿದ್ದಾರೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ನಮಗೆಲ್ಲ ಬಾಬಾ ಸಾಹೇಬ ಅಂಬೇಡ್ಕರ್ ರವರೇ ದೇವರು. ಬಂಗಾರಪ್ಪ ಅವರು ಬಿಜೆಪಿ ಹೋಗಲಿಲ್ಲ ಎಂದರೆ ಬಿಜೆಪಿಯವರು ಗೆಲ್ಲುತ್ತಿರಲಿಲ್ಲ. ಬಿಜೆಪಿಯವರು ಕ್ರಿಮಿನಲ್ ಚಿಂತನೆವುಳ್ಳವರು. ಇವರದ್ದು ಒಡೆದಾಳುವ ನೀತಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಸಂವಿದಾನದ ಹೆಸರಿನಲ್ಲಿ ಪ್ರಮಾಣ ಮಾಡಿ ಇವರು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ನಂಬರ್ ಒನ್ ಕ್ರಿಮಿನಲ್ ಎಂದು ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ನಮಗೆ ಎರಡು ಕಣ್ಣುಗಳಿದ್ದಂತೆ. ಆದರೆ ಗಾಂಧಿಯವರನ್ನು ಕೊಂದವರು ಬಿಜೆಪಿ ಅವರಿಗೆ ದೇವರಿಗೆ ಸಮ. ಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಾರ್ಟಿ ಎಂದು ವ್ಯಂಗ್ಯವಾಡಿದ್ದಾರೆ