ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಅಗಲಿ 11 ದಿನಗಳು ಕಳೆದಿದ್ದು. ಅವರ ಹುಟ್ಟೂರಾದ ಸೋಮನಹಳ್ಳಿಯಲ್ಲಿ ಇಂದು ವೈಕುಂಠ ಸಮಾರಾಧನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಎಸ್.ಎಂ.ಕೆ ಅವರ ಸಮಾದಿ ಬಳಿಗೆ ತೆರಳಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಪೂಜೆ ಸಲ್ಲಿಸಿದ್ದು. ಎಸ್.ಎಂ.ಕೆಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಸಮಾಧಿ ಮೇಲೆಟ್ಟು, ಕುಟುಂಸ್ಥರು ಪೂಜೆ ಸಲ್ಲಿಸಿದ್ದಾರೆ. ಎಸ್ಎಂಕೆ ಪುತ್ರಿ ಶಾಂಭವಿ, ಪತಿ ಉಮೇಶ್ ಇಂಗೋರಾಣಿ, ಡಿಕೆಶಿ ಪುತ್ರಿ ಐಶ್ವರ್ಯ, ಹಿರಿಯ ಪುತ್ರಿ ಮಾಳವಿಕ, ಅಳಿಯ ಅಮರ್ಥ್ಯ ಹೆಗ್ಡೆ ಸೇರಿದಂತೆ ಅನೇಕ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರ ಜೊತೆಗೆ ಶಾಸಕ ಕದಲೂರು ಉದಯ್, ಮಾಜಿ ಸಚಿವರಾದ ಸಿಎಸ್ ಪುಟ್ಟರಾಜು, ಡಿಸಿ ತಮ್ಮಣ್ಣ, ಮಾಜಿ ಸಂಸದ ಶಿವರಾಮೇಗೌಡ ಸೇರಿ ಮತ್ತಿತರರು ಭಾಗಿಯಾಗಿದ್ದಾರೆ.
ಬಗೆಬಗೆಯ ತಿಂಡಿಗಳನ್ನಿಟ್ಟು ಸಮಾಧಿಗೆ ಪೂಜೆ !
ಸಮಾಧಿ ಬಳಿ ಕುಟುಂಬಸ್ಥರು ಹಾಗೂ ಬಂಧು ಮಿತ್ರರಿಂದ ಪೂಜೆ ಸಲ್ಲಿಸಿದ್ದು. ‘ಎಸ್.ಎಂ.ಕೆಗೆ ಇಷ್ಟವಾದ ತಿಂಡಿ ತಿನಿಸುಗಳನ್ನ ಸಮಾಧಿ ಮೇಲೆ ಇಟ್ಟು ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಎಸ್ಎಂಕೆಗೆ ಇಷ್ಟವಾದ ಮೈಸೂರು ಪಾಕು, ಬಾದಾಮಿ ಅಲ್ವಾ, ಕೇಸರಿ ಬಾತು, ಡ್ರೈ ಜಾಮೂನ್, ರವೆ ಉಂಡೆ, ಕಡ್ಲೆ ಮಿಟಾಯಿ, ಚಕ್ಕುಲಿ, ನಿಪ್ಪಟ್ಟು, ಕೋಡು ಬಳೆ, ಡ್ರೈ ಫ್ರೋಟ್ಸ್. ವಡೆ ಇಟ್ಟಿ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದರ ಜೊತೆಗೆ ಸುಮಾರು 8 ಸಾವಿರ ಮಂದಿಗೆ ಅಡುಗೆ ತಯಾರಿಸಿದ್ದು. ಕನಕಪುರ ಚಂದ್ರು ಅವರ ನೇತೃತ್ವದಲ್ಲಿ ಊಟ ತಯಾರಿಸಿದ್ದಾರೆ ಎಂದು ತಿಳಿದು ಬಂದಿದೆ.