ದೆಹಲಿ: ನಿನ್ನೆ ವಿಧಾನ ಪರಷತ್ನಲ್ಲಿ ಸಿ.ಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಳ್ಕರ್ಗೆ ವಿವಾದಾತ್ಮಕ ಪದ ಬಳಕೆ ಆರೋಪಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ್ದು. ರಾಜಕಾರಣಿಗಳು ಯಾರೇ ಇರಲಿ ಅವರು ದೇಶದ ಜನಕ್ಕೆ ಮಾದರಿಯಾಗಿರಬೇಕು ಎಂದು ಪರೋಕ್ಷವಾಗಿ ಸಿ.ಟಿ ರವಿಯ ಹೇಳಿಕೆಯನ್ನು ಖಂಡಿಸಿದರು.
ದೆಹಲಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಬಿಜೆಪಿಯ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ‘ ರಾಜಕಾರಣಿ ಗಳು ಯಾರೇ ಇರಲಿ.. ಯಾವುದೇ ಪಕ್ಷದವರು ಆಗಿರಲಿ.. ಆದರೆ ಅವರು 140 ಕೋಟಿ ಜನರಿಗೆ ಮಾದರಿಯಾಗಿರಬೇಕು.
ಒಂದು ವೇಳೆ ‘ ಅಕಸ್ಮಾತ್ ರವಿ ಅವರು ಆ ಪದ ಬಳಕೆಯಾಗಿದ್ರೆ ತನಿಖೆ ಆಗಬೇಕು, ಆದರೆ ಸಿ.ಟಿ ರವಿಯವರನ್ನು ಸರ್ಕಾರ ನಡೆಸುಕೊಂಡ ರೀತಿ ಖಂಡನೀಯವಾಗಿದೆ. ತರಾತುರಿಯಲ್ಲಿ ಬಂಧಿಸಿ ದೇಶದ್ರೋಹಿಯ ರೀತಿ ಬೇರೆ ಬೇರೆ ಕಡೆ ಸುತ್ತಾಡಿಸಿದ್ದು ಸರಿ ಅಲ್ಲ. ರವಿ ಅವರಿಗೆ ವಕೀಲರ ಜೊತೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಆಡಳಿತ ನಡೆಯುತ್ತಿದೆಯೋ ಅಥವಾ ಚಂಬಲ್ ಕಣುವೆ ಗುಂಡಾಗಳ ರೀತಿಗಳ ರೀತಿ ಆಡಳಿತ ನಡೆಯುತ್ತಿದೆಯೋ? ಎಂದು ದೆಹಲಿಯಲ್ಲಿ ಬಿಜೆಪಿನ ಸಂಸದ ಗೋವಿಂದ ಕಾರಜೋಳ ವಿವರಿಸಿದರು.