Thursday, December 19, 2024

ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಹಾಕಿಸಲು ಕುರಿ-ಕೋಳಿ ಸಂಗ್ರಹಕ್ಕೆ ಮುಂದಾದ ಪ್ರಗತಿಪರರು !

ಮಂಡ್ಯ : ಜಿಲ್ಲೆಯಲ್ಲಿ ಇದೇ ಡಿಸೆಂಬರ್​ 20 ರಿಂದ ಸಾಹಿತ್ಯ ಸಮ್ಮೇಳನ ನಡೆಸುತ್ತಿದ್ದು. ಈ ಸಮ್ಮೇಳನದಲ್ಲಿ ಬಾಡೂಟ ಹಾಕಿಸಬೇಕು ಎಂದು ಪ್ರಗತಿಪರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈ ಮನವಿಗೆ ಜಿಲ್ಲಾಡಳಿತ ಸ್ಪಂದಿಸದೆ ಇರುವುದರಿಂದ ಪ್ರಗತಿಪರರು ಮನೆಗೊಂದು ಕೋಳಿ, ಊರಿಗೊಂದು ಕುರಿಯನ್ನು ಸಂಗ್ರಹಿಸಲು ಅಭಿಯಾನ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಡೂಟ ಹಾಕಿಸಬೇಕು ಎಂಬ ಪ್ರಗತಿ ಪರರ ಮನವಿಗೆ ಜಿಲ್ಲಾಡಳಿತ ಕ್ಯಾರೆ ಎನ್ನದ ಕಾರಣಕ್ಕೆ ಪ್ರಗತಿ ಪರರು ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದು. ‘ಮನೆಗೊಂದು ಕೋಳಿ, ಊರಿಗೊಂದು ಕುರಿ ‘ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಪೊಲೀಸರಿಂದ ಹಲ್ಲೆ : ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿ ಪ್ರತಿಭಟನೆಗೆ ಕುಳಿತ ಚಾಲಕ !

ಸಮ್ಮೇಳನದಲ್ಲಿ ಬಾಡೂಟ ಹಾಕಿಸಲು ಈ ಅಭಿಯಾನವನ್ನು ಆರಂಭಿಸಿದ್ದು. ಪ್ರತಿಯೊಂದು ಮನೆಯಿಂದ ಕೋಳಿಯನ್ನು ಸಂಗ್ರಹಿಸಿ, ಸಾಹಿತ್ಯ ಸಮ್ಮೇಳನದ ಸಮೀಪದಲ್ಲಿ ಅಥವಾ ಬೂದನೂರು ಬಳಿಯಲ್ಲಿ ಬಾಡೂಟ ಹಾಕಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮ್ಮೇಳನಕ್ಕೆ ಬರುವ ಆಸಕ್ತ ಮಾಂಸಹಾರಿಗಳಿಗೆ ಚಿಕನ್​ , ಮಟನ್​ ಮತ್ತು ಮೊಟ್ಟೆಯನ್ನು ನೀಡಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸಮ್ಮೇಳನದಲ್ಲಿ ಬಾಡೂಟಕ್ಕೆ ಆಗ್ರಹಿಸಿದ್ದ ಪ್ರಗತಿಪರ ಹೋರಾಟಗಾರರ  ಮಾತಿಗೆ ಜಿಲ್ಲಾಡಳಿತ ಮತ್ತು ಸಮ್ಮೇಳನ ಆಯೋಜಕರು ಸೊಪ್ಪು ಹಾಕದ ಕಾರಣ ಪ್ರಗತಿಪರ ಹೋರಾಟಗಾರರಾದ ನಾಗಣ್ಣಗೌಡ, ಬೂದನೂರು ಸತೀಶ್ ಸಿ.ಕುಮಾರಿ, ಜಯರಾಮ್,ಲಕ್ಷಣ್ ಸೇರಿ ಅನೇಕ ಪ್ರಗತಿ ಪರರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES