ಹಾಸನ : ನಾಟಿ ಕೋಳಿಗೆ ವಿಷವಿಟ್ಟು ಕೊಂದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು. ವಿಷ ಸೇವಿಸಿದ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದೆ ಎಂದು ಮಾಹಿತಿ ದೊರೆತಿದೆ. ಆಶ್ಚರ್ಯವೆಂದರೆ ಸತ್ತ ಒಂದು ಕೋಳಿಯ ಬಾಯಿಯಲ್ಲಿ ಬೆಂಕಿ ಬರುತ್ತಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಾದಿಗೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ ರವಿ ಮತ್ತು ಇತರರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದರ ಜೊತೆಗೆ ಅಲ್ಪಸ್ವಲ್ಪ ಆದಾಯಕ್ಕಾಗಿ ನಾಟಿ ಕೋಳಿಗಳನ್ನು ಸಾಕುತ್ತಿದ್ದರು. ಪ್ರತಿ ದಿನದಂತೆ ನಿನ್ನೆಯು ಕೂಡ ಕಾರ್ಮಿಕರು ಕೋಳಿಗಳನ್ನು ಹೊರಗೆ ಮೇಯಲು ಬಿಟ್ಟು ಕೆಲಸಕ್ಕೆ ಹೋಗಿದ್ದರು.
ಆದರೆ ಸಂಜೆ ಕೆಲಸದಿಂದ ಬಂದು ನೋಡಿದಾಗ ಕೋಳಿಗಾಳು ಸಾಮೂಹಿಕವಾಗಿ ಸಾವನ್ನಪ್ಪಿದ್ದು. ಯಾರೋ ದುರುಳರು ಕೋಳಿಗ ವಿಷ ಹಾಕಿ ಕೊಂದಿದ್ದಾರೆ. ಆಶ್ಚರ್ಯ್ಚವೆಂದರೆ ಸತ್ತ ಒಂದು ಕೋಳಿಯ ಬಾಯಿಯಿಂದ ಬೆಂಕಿ ಮತ್ತು ಹೊಗೆ ಬರುತ್ತಿದೆ ಎಂದು ತಿಳಿದು ಬಂದಿದೆ. ಕೋಳಿಗಳನ್ನು ಕಳೆದುಕೊಂಡ ಮಾಲೀಕರು ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದು. ಸ್ಥಳಕ್ಕೆ ಸಕಲೇಶಪುರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.