ಮಾಸ್ಕೊ: ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆಯನ್ನು 2025 ರ ಆರಂಭದಲ್ಲಿ ರೋಗಿಗಳಿಗೆ ಉಚಿತವಾಗಿ ವಿತರಿಸಲಾಗುವ ಎಂದು ರಷ್ಯಾದ ಆರೋಗ್ಯ ಸಚಿವಾಲಯ ಘೋಷಿಸಿದೆ. ಲಸಿಕೆಯನ್ನು ಕ್ಯಾನ್ಸರ್ ತಡೆಗಟ್ಟಲು ಸಾರ್ವಜನಿಕರಿಗೆ ನೀಡುವುದಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ವರದಿಯಾಗಿದೆ.
ರಷ್ಯಾದ ಆರೋಗ್ಯ ಸಚಿವಾಲಯದ ರೇಡಿಯಾಲಜಿ ವೈದ್ಯಕೀಯ ಸಂಶೋಧನಾ ಕೇಂದ್ರದ ಜನರಲ್ ಡೈರೆಕ್ಟರ್ ಆಂಡ್ರೆ ಕಪ್ರಿನ್ ಮಾತನಾಡಿ, ‘ಕ್ಯಾನ್ಸರ್ ವಿರುದ್ಧ ದೇಶವು ತನ್ನದೇ ಆದ MRNA ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಅದನ್ನು ಜನರಿಗೆ ಉಚಿತವಾಗಿ ವಿತರಿಸಲಾಗುವುದು’ ಎಂದು ರಷ್ಯಾ ಹೇಳಿದೆ.
ಇದನ್ನೂ ಓದಿ :
ಲಸಿಕೆಯು 2025 ರ ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ. ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿಗಾಗಿ ಗಮಾಲೆಯ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ TASS ಗೆ ‘ಲಸಿಕೆಯ ಪೂರ್ವ-ವೈದ್ಯಕೀಯ ಪ್ರಯೋಗಗಳು ಗೆಡ್ಡೆಯ ಬೆಳವಣಿಗೆ ಮತ್ತು ಸಂಭಾವ್ಯ ಮೆಟಾಸ್ಟೇಸ್‌ಗಳನ್ನು ನಿಗ್ರಹಿಸುವುದನ್ನು ಖಚಿತಪಡಿಸಿದೆ’ ಎಂದು ಹೇಳಿರುವುದಾಗಿ ವರದಿ ಮಾಡಿದೆ. ‘ಕ್ಯಾನ್ಸರ್ ಗೆ ಲಸಿಕೆಗಳನ್ನು ತಯಾರಿಸಲು ರಷ್ಯಾದ ವಿಜ್ಞಾನಿಗಳು ಹತ್ತಿರವಾಗಿದ್ದಾರೆ, ಅದು ಶೀಘ್ರದಲ್ಲೇ ರೋಗಿಗಳಿಗೆ ಲಭ್ಯವಾಗಲಿದೆ’ ಎಂದು ರಷ್ಯಾದ ಅಧ್ಯಕ್ಷ ವ್ಹಾದಿಮಿರ್ ಪುತಿನ್ ಅವರು ಘೋಷಿಸಿದ್ದರು.