ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಗುಕೇಶ್ ಕೇವಲ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಲೋಕದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಆದರೆ ಈ ಸಾಧನೆಯ ಹಿಂದೆ ಗುಕೇಶ್ನ ಸಾಮರ್ಥ್ಯ ಎಷ್ಟಿದೆಯೋ ಅಷ್ಟೆ ಉಳಿದವರ ಶ್ರಮವು ಅಡಗಿದೆ. ಭಾರತದ ಚೆಸ್ ದಿಗ್ಗಜ ವಿಶ್ವನಾಥ್ ಆನಂದ್ ಗುಕೇಶ್ಗೆ ಚೆಸ್ ಆಟದ ಬಗ್ಗೆ ತರಬೇತಿ ನೀಡಿದ್ದರೆ. ಮತ್ತೊಂದೆಡೆ ಪ್ಯಾಡಿ ಉಪ್ಟನ್ ಎಂಬ ಮಾನಸಿಕ ತರಬೇತುದಾರ ಭಾರತಕ್ಕೆ ಇಂದು ಒಲಿದಿರುವ ಚಾಂಪಿಯನ್ ಪಟ್ಟದ ಪಾಲುದಾರರಾಗಿದ್ದಾರೆ.
ಯಾರಿದು ಪ್ಯಾಡಿ ಉಪ್ಟನ್ ಎಂಬ ಮಾನಸಿಕ ತರಬೇತುದಾರ !
ಪ್ಯಾಡಿ ಉಪ್ಟನ್ ಒಬ್ಬ ಮಾನಸಿಕ ತರಬೇತುದಾರನಾಗದ್ದು. ಯಾವುದೇ ಆಟವಿರಲಿ ಮಾನಸಿಕ ತರಬೇತಿ ಬಹಳ ಮುಖ್ಯ ಎಂದು ನಂಬಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಯಾವುದೇ ಆಟವಿರಲಿ, ಅದು ಮೈಂಡ್ ಗೇಮ್. ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆ ಬಹಳ ಮುಖ್ಯ. ನಮ್ಮ ಎದುರಾಳಿ ಏನು ಯೋಚಿಸುತ್ತಿರಬಹುದು? ಅದಕ್ಕೆ ನಮ್ಮ ಉತ್ತರ ಹೇಗಿರಬೇಕು ಎಂದು ನಾವು ಮುಂಚೆಯೆ ಯೋಚಿಸಬೇಕು. ಪ್ರತಿಯೊಂದು ಸಂದರ್ಭಕ್ಕೂ ನಮ್ಮ ನಡವಳಿಕೆ ಹೇಗಿರಬೇಕು ಎಂಬ ನಿರ್ಧಾರವನ್ನು ಮೊದಲೇ ತೆಗೆದುಕೊಳ್ಳಬೇಕು. ಅದೇ ರೀತಿ ಗುಕೇಶ್ಗೆ ಪ್ಯಾಡಿ ಉಪ್ಟನ್ ನೀಡಿದ ಮಾನಸಿಕ ತರಬೇತಿ ಇಂದು 18 ವರ್ಷದ ಪೋರನಿಗೆ ವಿಶ್ವ ಚಾಂಪಿಯನ್ ಪಟ್ಟ ತಂದು ಕೊಟ್ಟಿದೆ ಎಂದರೆ ತಪ್ಪಾಗಲಾರದು.