ವಾಷಿಂಗಟನ್ : ಅಮೇರಿಕಾದಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ನೆಲೆಸಿರುವ ನಾಗರೀಕರನ್ನುಪತ್ತೆ ಹಚ್ಚಿ ಗಡಿಪಾರು ಮಾಡಲು ಅಮೇರಿಕಾ ಸರ್ಕಾರ ಮುಂದಾಗಿದೆ. ಅಮೇರಿಕಾದ ವಲಸೆ ವಿಭಾಗದ ಅಧಿಕಾರಿಗಳು, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ 1.445 ಮಿಲಿಯನ್ ಜನರ ಮಾಹಿತಿಯನ್ನು ಕಲೆಹಾಕಿದೆ. ಇವರ ಪೈಕಿ 17,940 ಭಾರತೀಯರೂ ಇದ್ದಾರೆ ಎನ್ನಲಾಗಿದೆ.
ಅಮೇರಿಕಾದಲ್ಲಿ ಸರಿ ಸುಮಾರು 7 ಲಕ್ಷ 25 ಸಾವಿರಕ್ಕೂ ಹೆಚ್ಚು ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಅಕ್ರಮ ವಲಸಿಗರನ್ನು ಕೂಡಲೇ ದೇಶದಿಂದ ಗಡಿಪಾರು ಮಾಡಬೇಕು ಎಂದು ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ನಾಗರಿಕರ ಪಟ್ಟಿಯಲ್ಲಿ ಮೆಕ್ಸಿಕೋ ಮತ್ತು ಎಲ್ ಸಾಲ್ವೆಡಾರ್ ನಂತರದ ಸ್ಥಾನದಲ್ಲಿ ಭಾರತವಿದೆ. ಕಳೆದ ಅಕ್ಟೋಬರ್ 22 ರಂದೇ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಅಮೇರಿಕಾ ಸರ್ಕಾರ ನಿರ್ಧರಿಸಿತ್ತು. ಅದಕ್ಕಾಗಿ ವಿಶೇಷ ವಿಮಾನವೊಂದನ್ನೂ ಸಹ ವ್ಯವಸ್ಥೆ ಮಾಡಲಾಗಿತ್ತು.ಆದರೆ, ಭಾರತ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಗಡಿಪಾರನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ಆ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದೆ.