ಬೆಳಗಾವಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸರಣಿ ವಿಚಾರವಾಗಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಇಂದಿನಿಂದ ಬೆಳಗಾವಿಯ ಸುವರ್ಣ ಸೌದ ಕಾವೇರುತ್ತಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವಂತಹ ಅನೇಕ ಅಂಶಗಳು ಈ ಬಾರಿ ವಿಪಕ್ಷಕ್ಕೆ ಸಿಕ್ಕಿದ್ದು. ಅದರಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಕೂಡ ಸೇರಿಕೊಂಡಿದೆ.
ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಾಣಂತಿಯರ ಸಾವಿನ ವಿಚಾರವಾಗಿ ಅಧಿವೇಶನದಲ್ಲಿ ಗಂಭೀರಾ ಚರ್ಚೆ ಆಗಬೇಕು. ಈ ವಿಶಯಕ್ಕೆ ಉತ್ತರ ಕೊಡಲು ನಾವು ರೆಡಿ ಇದ್ದೇವೆ. ನಿಜಾಂಶಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಮರಣಗಳು ಆಗುತ್ತಿವೆ, ಅದಕ್ಕೆಲ್ಲ ಕೇವಲ ವೈದ್ಯಕೀಯ ಪರಿಸ್ಥಿತಿ ಕಾರಣ ಎಂದು ಹೇಳುವಂತಿಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ದಿನೇಶ್ ಗುಂಡುರಾವ್ ‘ಪ್ರತಿ ವರ್ಷ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಇದ್ದೆ ಇರುತ್ತೆ
ಅದನ್ನೆ ಹಿಡಿದುಕ್ಕೊಂಡು ರಾಜಕೀಯ ಉದ್ದೇಶದಿಂದ ಮಾತನಾಡಬಾರದು. ವ್ಯವಸ್ಥೆಯನ್ನು ಸಾಕಷ್ಟು ಸರಿಪಡಿಸುವ ಕೆಲಸ ಇದೆ. ಬಾಣಂತಿಯರ ಮರಣದ ಬಗ್ಗೆ ಬೆಳಗಾವಿಯಲ್ಲಿ ಉತ್ತರ ಕೊಡಲಾಗುತ್ತದೆ. ಮೆಡಿಕಲ್ ಮಾಫಿಯಾ ವಿಚಾರವಾಗಿ ಸದನದಲ್ಲಿ ಮಾತನಾಡುತ್ತೇನೆ.
ಬಳ್ಳಾರಿಯ ಆಸ್ಪತ್ರೆಯಲ್ಲಿ ಆದ ಮರಣದ ವಿಚಾರವಾಗಿ ನಮಗೆ ಬಹಳ ಚಿಂತನೆ ಇದೆ. ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರೆತೆ ಇದೆ. ಮುಂದಿನ ದಿನಗಳಲ್ಲಿ ನೇಮಕಾತಿ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಬೆಳಗಾವಿಯಲ್ಲಿ ಹೇಳಿದರು.