Thursday, December 26, 2024

ಕುಡಿದ ಮತ್ತಿನಲ್ಲಿ ಯುವತಿ ಮೇಲೆ ಹಲ್ಲೆ ಮಾಡಿ ಪೋಲಿಸರ ಅಥಿತಿಯಾದ ಭೂಪ !

ಬೆಂಗಳೂರು: ಸಂಜಯನಗರ ಅಪಾರ್ಟ್ಮೆಂಟ್‌ವೊಂದರ ಮಾಲೀಕನ ಮಗ ಕಂಠಪೂರ್ತಿ ಕುಡಿದು ಯುವತಿಯೊಬ್ಬಳ ಜೊತೆ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ದೂರು ದಾಖಲಾಗಿದೆ.

ಪ್ಲಾನೆಟ್ ವಿಸ್ತಾ ಅಪಾರ್ಟ್ಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಟ್ಮೆಂಟ್ ಮಾಲೀಕನ ಮಗ ಮಂಜುನಾಥ್ ಗೌಡ ವಿರುದ್ಧ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪಶ್ಚಿಮ ಬಂಗಾಳ ಮೂಲದ ಯುವತಿ ದೂರು ದಾಖಲಿಸಿದ್ದಾಳೆ.

ಡಿ.3ರ ರಾತ್ರಿ 10:30ಕ್ಕೆ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಯುವತಿ ಹೋಗಿದ್ದಳು. ಆಗ ಆರೋಪಿ ಮಂಜುನಾಥ್ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆತ ಕುಡಿದಿದ್ದರಿಂದ ಏನೂ ಮಾತನಾಡದೇ ಯುವತಿ ಸುಮ್ಮನಾಗಿದ್ದಳು. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೇ ಬಿಗಿಯಾಗಿ ಕುತ್ತಿಗೆ ಹಿಡಿದಿದ್ದ, ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. ಆಗ ಆತನ ಮನೆಯೊಳಗೆ ಯುವತಿಯನ್ನ ಎಳೆದುಕೊಂಡು ಹೋಗಲು ಯತ್ನಿಸಿದ. ತಪ್ಪಿಸಿಕೊಂಡು ಹೋಗುವಾದ ಮತ್ತೆ ಬಲವಾಗಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗಲಾಟೆಯಾದ ಬೆಳಗ್ಗೆ ಕಿಟಕಿಯಲ್ಲಿ ಇಣುಕಿ ಮಂಜುನಾಥ್ ನೋಡಿದ್ದನಂತೆ. ಆಗ ಮನೆ ಒಳಗೆ ಬರ್ತೀನಿ ಎಂದಿದ್ದಾನೆ. ಯುವತಿ ಒಳಗೆ ಬಿಡದಿದ್ದಕ್ಕೆ ಮತ್ತೆ ನಿಂದನೆ ಮಾಡಿದ್ದಾನೆ. ಈ ಹಿಂದೆಯೂ ತನ್ನ ಜೊತೆ ಗಲಾಟೆ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.

ಇದನ್ನೂ ಓದಿ :DCM ಆದ 48 ಗಂಟೆಯೊಳಗೆ ಅಜಿತ್​ ಪವಾರ್​​ಗೆ ಬಿಗ್​ ರಿಲೀಫ್ ಕೊಟ್ಟ ನ್ಯಾಯಾಲಯ !

ಆರೋಪಿ ಯುವಕನನ್ನು ಅರೆಸ್ಟ್​ ಮಾಡಿದ ಪೋಲಿಸರು !

ಯುವತಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಿದ್ದ ಯುವಕನನ್ನು ಬಂಧಿಸುವಲ್ಲಿ ಸಂಜಯ್​ ನಗರ ಪೋಲಿಸರು ಯಶಸ್ವಿಯಾಗಿದ್ದು. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಸಂತ್ರಸ್ಥ ಯುವತಿಯನ್ನು ಸುರಕ್ಷತೆ ದೃಷ್ಟಿಯಿಂದ  ಮಾರತ್​ಹಳ್ಳೀಯ ಮತ್ತೊಂದು ಫ್ಲ್ಯಾಟ್​​ಗೆ ಶಿಫ್ಟ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES