ಬೆಂಗಳೂರು : ಫೆಂಗಲ್ ಚಂಡಮಾರುತ ಸೇರಿದಂತೆ ಅನೇಕ ಕಾರಣಗಳ ಪರಿಣಾಮವಾಗಿ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆಯಾಗುತ್ತಿದ್ದು. ಮಧ್ಯಮ ವರ್ಗದ ಜನರ ಜೀವನ ಬೆಲೆಏರಿಕೆ ಕಾರಣದಿಂದ ದುಸ್ಥರವಾಗಿದೆ ಎಂದೆ ಹೇಳಬಹುದಾಗಿದೆ.
ನುಗ್ಗೇಕಾಯಿ ಬೆಲೆ ಕೆಜಿಗೆ 500 ರೂಪಾಯಿ ತಲುಪಿದ್ದು. ಮಾರುಕಟ್ಟೆಯಲ್ಲಿ ಬಲು ದುಭಾರಿಯ ತರಕಾರಿಯಾಗಿದೆ. ಬೆಳುಳ್ಳಿಯ ಬೆಲೆಯು ಕೂಡ ಇದಕ್ಕೆ ಸ್ಪರ್ದೇ ಒಡ್ಡುವ ಹಾಗಿದ್ದು. ಕೆಜಿಗೆ 400 ರೂಪಾಯಿ ತಲುಪಿದೆ ಎಂದು ಮಾಹಿತಿ ದೊರೆತಿದೆ. ಜನರು ತರಕಾರಿಗಳ ಬೆಲೆಯನ್ನ ಕೇಳಿಯೆ ಸುಸ್ತಾಗುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.
ವಿವಿಧ ತರಕಾರಿಗಳ ಬೆಲೆಯ ಪಟ್ಟಿಯನ್ನು ಕೆಳಗೆ ನೀಡಲಾಗಿದೆ !
- ಟೊಮೆಟೊ- 60-70 ರೂ.
- ಶುಂಠಿ ಹೊಸದು- 60 ರೂ.
- ಹಳೆ ಶುಂಠಿ- 100 ರೂ.
- ಬೆಳ್ಳುಳ್ಳಿ- 360-400
- ಈರುಳ್ಳಿ- 70-80
- ಮೆಣಸಿನಕಾಯಿ – 40-50ರೂ.
- ಆಲೂಗಡ್ಡೆ- 35-40 ರೂ.
- ಬದನೆಕಾಯಿ- 30-40 ರೂ.
- ಬೆಂಡೆಕಾಯಿ- 40-60 ರೂ.
- ಬೀನ್ಸ್- 60 ರೂ.
- ಕ್ಯಾರೆಟ್- 60-80 ರೂ.
- ಕ್ಯಾಪ್ಸಿಕಂ ಗ್ರೀನ್- 50
- ಕ್ಯಾಪ್ಸಿಕಂ ಯೆಲ್ಲೋ, ರೆಡ್- 150-180 ರೂ.
- ಬಿಟ್ ರೋಟ್- 60 ರೂ.
- ಬದನೆಕಾಯಿ- 40 ರೂ.
- ನುಗ್ಗೆಕಾಯಿ- 500 ರೂ.
- ಬಟಾಣಿ- 180-200 ರೂ.