Saturday, January 11, 2025

ದೇವೇಗೌಡರು ಎಂದು ಒಕ್ಕಲಿಗರನ್ನ ಬೆಳೆಸಿಲ್ಲ: ಸಿದ್ದರಾಮಯ್ಯ

ಹಾಸನ: ಹಾಸನದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಜೆಡಿಎಸ್​ ವಿರುದ್ದ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು. ದೇವೇಗೌಡರ ವಿಚಾರವಾಗಿ ಮಾತನಾಡಿದ ಸಿಎಂ ದೇವೇಗೌಡರು ಎಂದು ಬೇರೆಯವರು ಬೆಳೆಯುವುದನ್ನು ಇಷ್ಟಪಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ತಮ್ಮ ಮಾತಿನುದ್ದಕ್ಕು  ಬಿಜೆಪಿ ಮತ್ತು ಜೆಡಿಎಸ್​ಗೆ ಪ್ರಶ್ನೆಗಳ ಸವಾಲು ಹಾಕಿದ ಸಿದ್ದರಾಮಯ್ಯ, ವಿಪಕ್ಷಗಳಿ ಗ ಬಗ್ಗೆ ಬೆಂಕಿಯುಗುಳಿದರು. ದೇವೇಗೌಡರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ‘ ದೇವೇಗೌಡರ ಯಾವುತ್ತು ಬೇರೆಯವರನ್ನು ಬೆಳೆಸಲು ಇಷ್ಡಪಡಲ್ಲ. ಬೇರೆಯವರು ಹೋಗಲಿ ಒಕ್ಕಲಿಗರನ್ನೆ ಬೆಳೆಸಲ್ಲ ಎಂದು ಅನೇಕ ಒಕ್ಕಲಿಗ ನಾಯಕರ ಹೆಸರನ್ನು ಹೇಳಿ ವಾಗ್ದಾಳಿ ನಡೆಸಿದರು.

ಈ ಮಾತನ್ನು ನಾನು ಹೇಳಿದರೆ ಸಿದ್ದರಾಮಯ್ಯ ಒಕ್ಕಲಿಗರ ವಿರುದ್ದ ಮಾತಾಡಿದ ಎಂದು ಎತ್ತಿಕಟ್ಟುತ್ತಾರೆ. ಸಿದ್ದರಾಮಯ್ಯ ದೇವೇಗೌಡರಿಂದ ಹಣಕಾಸು ಮಂತ್ರಿಯಾದ, ಹಾಗಾಗಿ ಬೆಳೆದ ಎಂದು ಹೇಳುತ್ತಾರೆ. ಆದರೆ ನಾನು ಜಾಲಪ್ಪ ಇಲ್ಲದೆ ಹೋಗಿದ್ದರೆ ದೇವೇಗೌಡರು ಸಿಎಂ ಆಗುತ್ತಿದ್ದರಾ. ಎಂದು ಹೇಳಿದರು.

ಜೆಡಿಎಸ್​ ಈಗ ಕೋಮುವಾದಿಗಳ ಜೊತೆ ಸೇರಿಕೊಂಡಿದೆ.ಜಾರಕಿಹೋಳಿ, ಮಹದೇವಪ್ಪ, ಸುಬ್ಬಯ್ಯ ಎಲ್ಲಾ ಸೇರಿ ಜೆಡಿಎಸ್​ ಪಕ್ಷವನ್ನು ಕಟ್ಟಿದ್ದೆವು. ಆದರೆ ನಾನು ಅಹಿಂದ ಸಮಾವೇಶ ಮಾಡಿದೆ ಎಂದು ನನ್ನನ್ನು ಪಕ್ಷದಿಂದ ತೆಗೆದರು. ನಾನೇನು ಪಕ್ಷ ಬಿಟ್ಟು ಬರಲಿಲ್ಲ, ಅವರೆ ನನ್ನನ್ನು ಪಕ್ಷದಿಂದ ವಜಾ ಮಾಡಿದರು. ನಮ್ಮ ಯೋಜನೆಗಳನ್ನು ನಿಲ್ಲಿಸೋಕೆ ಬಿಜೆಪಿ ಮತ್ತು ಜೆಡಿಎಸ್​​ ಪ್ರಯತ್ನ ಮಾಡುತ್ತಿವೆ. ಆದರೆ ಬೇರೆ ರಾಜ್ಯದಲ್ಲಿ ನಡೆಯೋ ರೀತಿ ನಮ್ಮಲ್ಲಿ ಮಾಡಲು ಸಾಧ್ಯವಿಲ್ಲ. ಸುಮಾರು 56 ಸಾವಿರ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES