Friday, January 3, 2025

ಸಮಾವೇಶಕ್ಕೆ ತೆರಳುತ್ತಿದ್ದ ಸಚಿವರ ಕಾರಿಗೆ ಅಪಘಾತ : ಅಪಾಯದಿಂದ ಪಾರಾದ ಆಹಾರ ಸಚಿವ !

ಹಾಸನ: ಕಾಂಗ್ರೆಸ್​ ನಾಯಕರು ಇಂದು ಹಾಸನದ ಎಸ್​,ಎಂ ಕೃಷ್ಣ ನಗರದಲ್ಲಿ ಜನಕಲ್ಯಾಣ ಸಮಾವೇಶ ನಡೆಸುತ್ತಿದ್ದು. ಇಡೀ ಕಾಂಗ್ರೆಸ್​ ಪಾಳಯ ಹಾಸನದಲ್ಲಿ ಬೀಡು ಬಿಟ್ಟಿದೆ. ಇದೇ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಾಂಗ್ರೆಸ್​ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್​ ಮುನಿಯಪ್ಪನವರ ಕಾರಿಗೆ ಅಪಘಾತವಾಗಿದ್ದು. ಸಚಿವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಮಾಹಿತಿ ದೊರೆತಿದೆ.

ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿದ್ದು. ರಾಷ್ಟ್ರೀಯ ಹೆದ್ದಾರಿ 75ರ ಶಾಂತ್ರಿಗ್ರಾಮ ಟೋಲ್ ಬಳಿ ಘಟನೆ ನಡೆದಿದೆ. ಸಚಿವರ ಕಾರಿಗೆ ಹಿಂಬದಿಯಿಂದ ಇನ್ನೊಂದು ಇನೋವಾ ಕಾರು ಡಿಕ್ಕಿ ಹೊಡೆದಿದ್ದು. ಸಚಿವ ಕೆಎಚ್​​ ಮುನಿಯಪ್ಪನವರ ಕಾರು ಜಖಂ ಆಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES