ಯಾದಗಿರಿ: ಕುರಿ ವ್ಯಾಪಾರಸ್ಥನೊಬ್ಬ ತನ್ನ ಕುರಿಗಳನ್ನು ಮಾರುಕಟ್ಟೆಗೆ ತರುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿ. ಸುಮಾರು 8 ಕುರಿಗಳು ಸಾವನ್ನಪ್ಪಿದೆ ಎಂದು ಮಾಹಿತಿ ದೊರೆತಿದೆ. ಅಪಘಾತ ಮಾಡಿದ ಲಾರಿ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ದೊರೆತಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಕ್ರಾಸ್ ಬಳಿ ಘಟನೆ ನಡೆದಿದ್ದು. ವ್ಯಾಪಾರಸ್ಥರು ತಮ್ಮ 52 ಕುರಿಗಳನ್ನು ನಾರಾಯಣಪುರ ಮಾರ್ಗವಾಗಿ ಹುಣಸಗಿ ಮಾರುಕಟ್ಟೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಲಾರಿ ಚಾಲಕನೊರ್ವ ನಿದ್ದೆಗಣ್ಣಿನಲ್ಲಿ ಕುರಿಗಳ ಮೇಲೆ ಲಾರಿ ಹರಿಸಿದ್ದು. ಸುಮಾರು 8 ಕುರಿಗಳು ಸಾವನ್ನಪ್ಪಿವೆ.
ಕುರಿ ವ್ಯಾಪಾರಸ್ಥರು ಲಾರಿ ಚಾಲಕನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದು. ಹುಣಸಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.