ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ, 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯು 7,150 ರೂಪಾಯಿ ಇದ್ದು, 10 ಗ್ರಾಂ ನ ಬೆಲೆ 71,500 ರುಪಾಯಿ ಇದೆ.
ಶುಕ್ರವಾರದಿಂದ ಶನಿವಾರಕ್ಕೆ 10 ಗ್ರಾಂ ನಲ್ಲಿ 100 ರುಪಾಯಿ ಇಳಿಕೆಯಾಗಿದೆ. ಇನ್ನು ಶುದ್ಧ ಚಿನ್ನ 24 ಕ್ಯಾರೆಟ್ ಬೆಲೆ 7,800 ರೂ ಇದೆ. 18 ಕ್ಯಾರೆಟ್ ಚಿನ್ನದ ಬೆಲೆ 5,850 ರೂಪಾಯಿ ಆಗಿದೆ. ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 7,150 ರೂ ಇದ್ದು, 24 ಕ್ಯಾರೆಟ್ ಗೆ 7,800 ರೂಪಾಯಿ ಇದೆ.
ಇನ್ನು ಬೆಳ್ಳಿಯ ದರದಲ್ಲಿ ಏರಿಕೆ ಆಗಿದ್ದು, 1 ಗ್ರಾಂ ಗೆ 91ಸಾವಿರ ರೂ ಇದೆ. ಕೆಜಿ ಬೆಲೆ 91,500 ರೂ ಇದೆ. ನವೆಂಬರ್ 1 ರಂದು 7,385 ರೂ ನಷ್ಟಿದ್ದ ಚಿನ್ನದ ಬೆಲೆ ನವೆಂಬರ್ 30 ರಂದು 7,150 ಕ್ಕೆ ಇಳಿಕೆ ಆಗಿದೆ. ನವೆಂಬರ್ 1 ರಂದು ಗರಿಷ್ಠ ಬೆಲೆ ದಾಖಲಾಗಿದ್ದರೆ, ಅತಿ ಕಡಿಮೆ ಬೆಲೆ ನವೆಂಬರ್ 14 ರಂದು 6,935 ಅತಿ ಕಡಿಮೆ ಬೆಲೆ ಇತ್ತು.
ಸದ್ಯ ಚಿನ್ನದ ದರ ಇಳಿಕೆ ಹಾದಿಯಲ್ಲಿದೆ.ಸತತ ಏರಿಕೆಯಿಂದ ಸದ್ದು ಮಾಡಿದ್ದ ಚಿನ್ನದ ಬೆಲೆಯಲ್ಲಿ ಈ ವಾರ ಇಳಿಕೆಯಾಗಿದ್ದು, ಇಂದು ಚಿನ್ನ ಕೊಳ್ಳುವವರ ಜೇಬಿಗೆ ಉತ್ತಮ ಉಳಿತಾಯವಾಗಲಿದೆ. ದೇಶದಲ್ಲಿ ಹಬ್ಬದ ಸೀಸನ್, ಜಾಗತಿಕ ಮಟ್ಟದ ಆರ್ಥಿಕತೆ, ಹಣದುಬ್ಬರದ ಅನಿಶ್ಚಿತತೆ,ಅಮೆರಿಕ ಬಡ್ಡಿ ದರ ಇಳಿಕೆ, ಡಾಲರ್ ಎದುರು ರುಪಾಯಿ ಕುಸಿತ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಎಲ್ಲವೂ ಪ್ರಭಾವ ಬೀರುತ್ತದೆ. ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ