ಮಂಡ್ಯ: ಸಿ.ಪಿ.ಯೋಗೇಶ್ವರ್ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ಗೆ ಕರೆದೊಯ್ಯುತ್ತೇನ ಎಂಬ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು. ಜೆಡಿಎಸ್ ಪಕ್ಷದ ನಾಯಕರನ್ನು ಅಲ್ಲಾಡಿಸೊದ್ದಕ್ಕೆ ಆಗೋದಿಲ್ಲ, ಸಿಪಿ ಯೋಗೇಶ್ವರ್ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಹೇಳಿಕೆ ನೀಡಿದ ಮಾಜಿ ಸಚಿವ ಸಿಎಸ್ ಪುಟ್ಟರಾಜು ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಶ್ರಮಿಸಿದ್ದಾರೆ. ನಿಖಿಲ್ ಚುನಾವಣಾ ಪ್ರಚಾರದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಅವರಿಗೆ ನಮ್ಮ ಪಕ್ಷದ ವತಿಯಿಂದ ಕೃತಜ್ಞತೆ ತಿಳಿಸುತ್ತೇನೆ. ಯೋಗೇಶ್ವರ್ ಗೆದ್ದಿದ್ದಾರೆ ಅದನ್ನು ಸ್ವಾಗತ ಮಾಡ್ತೇವೆ. ಚನ್ನಪಟ್ಟಣ ಮತದಾರರನ್ನ ಯೋಗೇಶ್ವರ್ ಗೌರವಿಸಬೇಕು. ಗೆಲುವಿನ ಮದದಿಂದ ದೇವೇಗೌಡ್ರುನ ಮನೇಲಿರಿ ಅನ್ನೋದು. ಕುಮಾರಸ್ವಾಮಿಯನ್ನು ರಣಹೇಡಿ ಅನ್ನೋದು ಗೌರವ ತರುವುದಿಲ್ಲ.
ಯೋಗೇಶ್ವರ್ ಕೂಡ ಹಲವಾರು ಬಾರಿ ಸೋತಿದ್ದಾರೆ ಅದನ್ನು ಮನಸಲ್ಲಿ ಇಟ್ಟಿಕೊಳ್ಳಲಿ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಪುಟ್ಟರಾಜ ‘ನಿಖಿಲ್ರನ್ನು ಮಂಡ್ಯ ಲೋಕಸಭೆ ಚುನಾವಣೆಗೆ ನಿಲ್ಲಿಸಿದ್ವಿ ಆದರೆ ಮಂಡ್ಯದ ಜನರೊಂದಿಗೆ ಅಂಬರೀಶ್ ಹೊಂದಿದ್ದ ಅವಿನಾಭಾವ ಸಂಬಂಧ ನಿಖಿಲ್ರನ್ನು ಸೋಲಹಾಗೆ ಮಾಡಿತು. ಆದರೆ ಜನಾಭಿಪ್ರಾಯದ ಮುಂದೆ ನಾವು ಯಾರು ಅಲ್ಲ. ರಾಜಕಾರಣಕ್ಕೆ ದೇವೇಗೌಡ್ರು ಬೀದಿಯಲ್ಲಿ ಓಡಾಡ್ತಿಲ್ಲ. ರೈತರಿಗಾಗಿ ಓಡಾಡುತ್ತಿದ್ದಾರೆ’ .
ಯೋಗೇಶ್ವರ್ ದೇವೇಗೌಡರನ್ನು ನಿಂದಿಸಿದರೆ ಗೂಟದ ಕಾರು ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ. ಚನ್ನಪಟ್ಟಣದ ಕೆಲವು ಕೆರೆಗಳನ್ನು ತುಂಬಿಸಿ ನಾನೇ ಭಗೀರಥ ಎಂದುಕೊಂಡಿದ್ದಾರೆ. ಆದರೆ ನಿಜವಾಗಿಯು ಕೆರೆಗಳನ್ನು ತುಂಬಿಸಿದ್ದು ಕುಮಾರಸ್ವಾಮಿ. ಹೊಸದಾಗಿ ರಾಮನಗರ ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ಆದ್ದರಿಂದ ಜೆಡಿಎಸ್ ಮುಗಿಸುತ್ತೇವೆ ಎಂದು ಹೇಳುವ ಮುನ್ನ ಎಚ್ಚರಿಕೆಯಿಂದಿರಿ ಎಂದು ಹೇಳಿದರು.
ಜೆಡಿಎಸ್ ಕುಟುಂಬದ ಬಗ್ಗೆ ಗೌರವವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬ ರಾಜಕಾರಣ ಮಾಡುತ್ತಿರುವವರ ಲಿಸ್ಟ್ ಕೊಡ್ಲಾ? ನಿಮ್ಮದು ಕುಟುಂಬ ರಾಜಕಾರಣವಲ್ಲವ. ಮಾತನಾಡುವಾಗ ಎಚ್ಚರಿಕೆಯಿಂದಿರಿ. ಜೆಡಿಎಸ್ ಶಾಸಕರನ್ನು ದುಡ್ಡುಕೊಟ್ಟು ಕರೆದುಕೊಂಡು ಹೋಗುತ್ತೇವೆ ಎನ್ನುವುದು ಭ್ರಮೆ. ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಿ. ನಿಮ್ಮ ಬಗ್ಗೆ ಡಿ.ಕೆ ಸುರೇಶ್ ಮಾತನಾಡಿರುವ ರೆಕಾರ್ಡ್ ಇದೆ. ಅದನ್ನು ಬಿಡುಗಡೆ ಮಾಡಿ ಬೀದಿ ಬೀದಿಲಿ ನಿಮ್ಮ ಮಾನ ಹರಾಜು ಹಾಕುತ್ತೇವೆ’ ಎಂದು ಹೇಳಿದರು.
ಕಾವೇರಿ ವಿಚಾರವಾಗಿ ದೇವೇಗೌಡರು ಸಾಕಷ್ಟು ಹೋರಾಟ ಮಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡಿದರೆ ನಿಮ್ಮ ಬಂಡವಾಳವನ್ನು ಬಿಚ್ಚಿಡುತ್ತೇವೆ. ಚುನಾವಣೆಯ ಸಮಯದಲ್ಲಿ ಗೃಹಲಕ್ಷ್ಮಿ ಹಣ ಹಾಕಿ ಗೆಲುವು ಸಾಧಿಸಿದ್ದಾರೆ.9ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಶಾಸಕ ಯೋಗೇಶ್ವರ್ಗೆ ಎಚ್ಚರಿಕೆ ನೀಡಿದರು.