ರಾಮನಗರ : ಚನ್ನಪಟ್ಟಣದ ನೂತನ ಶಾಸಕ ಸಿ.ಪಿ ಯೋಗೇಶ್ವರ್ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದ್ದು. ‘ಕುರುಕ್ಷೇತ್ರದ ಬಭ್ರುವಾಹನದ ರೀತಿ ಮಗನನ್ನು ಯುದ್ದಭೂಮಿಗೆ ಕಳುಹಿಸಿದ ರಣಹೇಡಿ ಕುಮಾರಸ್ವಾಮಿ’ ಎಂದು ಹೇಳಿದರು.
ಸಿಪಿ ಯೋಗೇಶ್ವರ್ ಕಾಂಗ್ರೆಸ್ನಲ್ಲೆ ಉಳಿಯುತ್ತಾರಾ ಎಂಬ ವಿಚಾರಕ್ಕೆ ಮಾತನಾಡಿದ ಸಿ.ಪಿ ಯೋಗೇಶ್ವರ್ ‘ ನಾನು ಕಾಂಗ್ರೆಸ್ ನಲ್ಲೇ ಇರ್ತಿನಿ. ನಾನು ಎಂದಾದರು ಕಾಂಗ್ರೆಸ್ ಬಿಡ್ತೀನಿ ಅಂತಾ ಹೇಳಿದ್ದೀನಾ. ನಾನೇನು ಬಿಜೆಪಿ ಬಿಟ್ಟು ಬರಲಿಲ್ಲ ಅವರೆ ನನನ್ನು ಆಚೆ ತಳ್ಳಿದರು. ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರರ ಪಿತೂರಿಯಿಂದ ನಾನು ಆಚೆ ಬಂದಿದ್ದೆನೆ. ಅನಿವಾರ್ಯ ರಾಜಕೀಯ ಪರಿಸ್ಥಿತಿ ಈ ರೀತಿಯಾಗಿ ಮಾಡಿದೆ ಎಂದು ಹೇಳಿದರು.
ನಾನು ಬಿಜೆಪಿ ಬಿಡೋದಕ್ಕೆ ಮುಂಚೆ ಕೊನೆ ದಿನದವರೆಗೆ ಕಾದು ನೋಡಿದ್ದೇನೆ. ನಂತರ ನಿರ್ಣಯ ತೆಗೆದುಕೊಂಡಿದ್ದೇನೆ. ನಾನು ಕಟ್ಟಿದ ಮನೆಯಿಂದಲೆ ನನ್ನನ್ನು ಹೊರಹಾಕಿದ್ದಾರೆ. ಈಗ ನಾನು ಪಕ್ಕಾ ಕಾಂಗ್ರೆಸಿಗ, ನಾನು ಕಾಂಗ್ರೆಸ್ ಪಕ್ಷ ಬಿಡೋದಿಲ್ಲ. ಜೆಡಿಎಸ್ನವರು ಸೋತು ಸುಣ್ಣವಾಗಿದ್ದಾರೆ. ಕುಮಾರಸ್ವಾಮಿ ಮಗನನ್ನು ರಣಭೂಮಿಗೆ ಕಳುಹಿಸಿದ ರಣಹೇಡಿ. ಕೇಂದ್ರ ಮಂತ್ರಿಯಾಗಿ ಮಗನನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದ ಇವರು ಮಂತ್ರಿಯಾಗಿ ಏನು ಪ್ರಯೋಜನ, ಎಂದು ಹೇಳಿದರು.