ಬೆಂಗಳೂರು : ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನಾಡಲು ಮಧ್ಯಪ್ರದೇಶದ ಇಂದೋರ್’ಗೆ ಹೊರಟು ನಿಂತಿದ್ದ ಕರ್ನಾಟಕ ತಂಡಕ್ಕೆ ವಿಮಾನ ಸಿಗದೆ ಪರದಾಡಿದ ಘಟನೆ ನೆನ್ನೆ(ನ.20) ಸಂಜೆ ನಡೆದಿದ್ದು. ಸುಮಾರು 3ಗಂಟೆಗಳಷ್ಟು ಸಮಯವನ್ನು ವಿಮಾನದಲ್ಲೆ ಕಳೆದಿದ್ದಾರೆ ಎಂದು ಮಾಹಿತಿ ದೊರೆತಿದೆ.
ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ ನೆನ್ನೆ ಸಂಜೆ ಸೈಯದ್ ಮುಸ್ತಾಕ್ ಅಲಿ ಟಿ20 ಟೂರ್ನಿ ಆಡಲು ಇಂದೋರ್ಗೆ ಪ್ರಯಾಣ ಬೆಳೆಸಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದಲ್ಲಿ ಇಂದೋರ್ಗೆ ಹೊರಟಿದ್ದ ಕರ್ನಾಟಕ ತಂಡದ ಸದಸ್ಯರು ವಿಮಾನದಲ್ಲಿ ಕುಳಿತಿದ್ದರು. ಆದರೆ Run wayನಲ್ಲಿ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ವಿಮಾನ ನಿಂತು ಬಿಟ್ಟಿದ್ದು. ಏನಾಯಿತು ಎನ್ನುವಷ್ಟರಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ ಎಂಬ ಸುದ್ದಿ ಬಂದಿದೆ.
ವಿಮಾನದ ಸಿಬ್ಬಂದಿಗಳು ಸಹ ’ಅಡಚಣೆಗಾಗಿ ಕ್ಷಮಿಸಿ, ಕೆಲವೇ ಕ್ಷಣಗಳಲ್ಲಿ ವಿಮಾನ ಟೇಕಾಫ್ ಆಗಲಿದೆ’ ಎಂದು ಘೋಷಣೆಗಳನ್ನು ಹೊರಡಿಸಿದ್ದಾರೆ. ಆದರೆ ಸುಮಾರು ಮೂರು ಗಂಟೆಗಳ ಕಾಯುವಿಕೆಯ ನಂತರ ವಿಮಾನದಲ್ಲಿ ಭಾರೀ ಪ್ರಮಾಣದ ತಾಂತ್ರಿಕ ದೋಷ ಉಂಟಾಗಿದ್ದರಿಂದ ವಿಮಾನವನ್ನು ರದ್ದುಗೊಳಿಸಲಾಯಿತು ಎಂದು ಮಾಹಿತಿ ದೊರೆತಿದೆ.
ಸುಮಾರು ರಾತ್ರಿ 9 ಗಂಟೆ ವೇಳೆಗೆ ವಿಮಾನವನ್ನು ರದ್ದುಗೊಳಿಸಿದ್ದು.ವಿಮಾನದಿಂದ ಇಳಿದ ಕರ್ನಾಟಕ ತಂಡದ ಆಟಗಾರರು ಮತ್ತೆ ಟರ್ಮೀನಲ್ಗೆ ಮರಳಿ ಕಾಯುತ್ತಾ ಕುಳಿತ್ತಿದ್ದಾರೆ. ರಾತ್ರಿ 11.30ಕ್ಕೆ ಬದಲಿ ವಿಮಾನದ ವ್ಯವಸ್ಥೆಯಾಗಿದೆ ಎಂಬ ಭರವಸೆ ಸಿಕ್ಕಿದೆ ಎಂದು ಮಾಹಿತಿ ದೊರೆತಿದೆ.
ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಕರ್ನಾಟಕ ತಂಡ ಹೀಗಿದೆ.
ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ಉಪನಾಯಕ), ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್), ವೈಶಾಕ್ ವಿ., ಮ್ಯಾಕ್ನೈಲ್ ಹೆಚ್.ನೊರೊನ್ಹಾ, ಕೌಶಿಕ್ ವಿ., ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಚೇತನ್ ಎಲ್.ಆರ್. (ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ ಹಾಗೂ ಮನ್ವಂತ್ ಕುಮಾರ್ ಎಲ್.