ಬೆಂಗಳೂರು : ನಗರದ ರಾಜ್ಕುಮಾರ್ ರಸ್ತೆಯಲ್ಲಿನ ಎಲೆಕ್ಟ್ರಿಕ್ ಶೋರೂಂಗೆ ಬೆಂಕಿಬಿದ್ದು ಯುವತಿ ಸಜೀವ ದಹನವಾದ ಪ್ರಕರಣದಲ್ಲಿ ಶೋರೂಂ ಮಾಲೀಕನಿಗೆ ಮತ್ತು ಮ್ಯಾನೇಜರ್ಗೆ ಜಾಮೀನು ದೊರೆತಿದೆ ಎಂದು ಮಾಹಿತಿ ದೊರೆತಿದೆ.
ನೆನ್ನೆ (ನ.19) ಸಂಜೆ ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿನ ev ಶೋರೂಂಗೆ ಬೆಂಕಿ ಬಿದ್ದು ಯುವತಿಯೊಬ್ಬಳು ಸಜೀವ ದಹನವಾಗಿದ್ದಳು. ಈ ಪ್ರಕರಣದಲ್ಲಿ ಶೋರೂಂ ಮಾಲೀಕ ಪುನೀತ್ ಮತ್ತು ಮ್ಯಾನೇಜರ್ ಯುವರಾಜ್ ಎಂಬುವವರನ್ನು ಬಂಧಿಸಲಾಗಿತ್ತು. ಮೃತ ಯುವತಿ ಪ್ರಿಯಾ ಕುಟುಂಬಸ್ಥರಿಂದ ದೂರು ಕೊಟ್ಟ ಹಿನ್ನಲೆ ಇವರನ್ನು ಬಂದಿಸಲಾಗಿತ್ತು.
ರಾಜಾಜಿನಗರ ಪೊಲೀಸರಿಂದ ಇಂದು ಇಬ್ಬರನ್ನು ಬಂಧನ ಮಾಡಲಾಗಿತ್ತು ಮತ್ತು ಇವರ ಇಬ್ಬರ ವಿರುದ್ದ ಎಫ್ಐಆರ್ ದಾಖಲಿಸಿ ಇವರನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದರು. 32ನೇ ಎಸಿಎಂಎಂ ಕೋರ್ಟ್ನಲ್ಲಿ ಆರೋಪಿಗಳ ವಿಚಾರಣೆ ಮಾಡಿದ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ನೀಡಿ ಆರೋಪಿಗಳನ್ನು ಬಂಧ ಮುಕ್ತ ಮಾಡಿದೆ.