ಬೆಂಗಳೂರು : ಅಕ್ರಮ ಆಸ್ತಿಗಳಿಕೆ ಆರೋಪದಲ್ಲಿ ಸಚಿವ ಜಮೀರ್ ಅಹಮದ್ಖಾನ್ಗೆ ಲೋಕಾಯುಕ್ತದಿಂದ ನೋಟಿಸ್ ನೀಡಿದ್ದು. ವಿಚಾರಣೆಗೆ ಹಾಜರಾಗುವಂತೆ ಖುದ್ದು ಲೋಕಾಯುಕ್ತ ಇನ್ಸ್ಪೆಕ್ಟರ್ ಮನೆಗೆ ಬಂದು ನೋಟಿಸ್ ನೀಡಿ ಹೋಗಿದ್ದಾರೆ.
ಬಂಬೂಬಜಾರ್ ನಲ್ಲಿರೋ ಮನೆ ಹಾಗೂ ಕಲಾಸಿಪಾಳ್ಯದ ಕಚೇರಿ ಮೇಲೆ ದಾಳಿ ನಡೆಸಿ ಕೇಸ್ ದಾಖಲಿಸಿದ್ದ ಎಸಿಬಿ. ನಂತರ ಎಸಿಬಿ ತನಿಖಾ ಸಂಸ್ಥೆ ರದ್ದಾದ ಬಳಿಕ ಪ್ರಕರಣವನ್ನು ಲೋಕಾಯುಕ್ತಗೆ ವರ್ಗಾವಣೆ ಮಾಡಿದ್ದರು. ಇದರ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಡಿಸೆಂಬರ್ 03ರಂದು ವಿಚಾರಣೆಗೆ ಹಾಜರಾಗುವಂತೆ ಜಮೀರ್ಗೆ ನೋಟಿಸ್ ನೀಡಿದ್ದಾರೆ.