ಬೆಂಗಳೂರು : ಮಾಜಿ ಸಂಸದ ಪ್ರತಾಪ್ ಸಿಂಹಗೆ ವಿಜಯೇಂದ್ರ ಟಕ್ಕರ್ ನೀಡಿದ್ದು. ವಕ್ಫ್ ವಿಚಾರವಾಗಿ ಬಿಜೆಪಿ ಆರಂಭಿಸಿರುವ ರಾಜ್ಯ ಪ್ರವಾಸಕ್ಕೆ ಮಾಜಿ ಸಂಸದ ಪ್ರತಾಪ್ಸಿಂಹಗೆ ಅವಕಾಶ ನೀಡದೆ ಇರುವುದು ಬಿಜೆಪಿಯಲ್ಲಿ ನಡೆಯುತ್ತಿರುವ ಒಳಜಗಳಕ್ಕೆ ಕನ್ನಡಿ ಇಡಿದಂತಾಗಿದೆ.
ವಿಜಯೇಂದ್ರ ನಾಯಕತ್ವದ ವಿರುದ್ಧ ಸಿಡಿದೆದಿದ್ದ ಪ್ರತಾಪ್ ಸಿಂಹಗೆ ಸಂಘಟನೆಯಲ್ಲಿ ಅವಕಾಶ ನೀಡದೆ ತಂಡದಿಂದ ಹೊರಗೆ ಇಟ್ಟಿದ್ದಾರೆ. ಇತರೆ ರೆಬಲ್ಸ್ ಟೀಮ್ನ ಸದಸ್ಯರಿಗೆ ಅವಕಾಶ ನೀಡಿದ್ದು. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿಗೆ ಮಾತ್ರ ಸ್ಥಾನ ನೀಡಿದ್ದು. ಉಳಿದಂತೆ ಅವರ ಟೀಮ್ ನಲ್ಲಿದ್ದ ಪ್ರತಾಪ್ ಸಿಂಹಗೆ ಅವಕಾಶ ನೀಡದೆ ಹೊರಗೆ ಉಳಿಸಿದ್ದಾರೆ.
ಕಳೆದ ಆರ್ಎಸ್ಎಸ್ ನಾಯಕರ ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದನ ಪ್ರತಾಪ್ ಸಿಂಹ. ತಮಗೆ ಮೈಸೂರು ಸಂಸದ ಸ್ಥಾನದ ಟಿಕೆಟ್ ಕೈತಪ್ಪಲು ವಿಜಯೇಂದ್ರ ಕಾರಣ ಎಂದು ಆಂತರಿಕವಾಗಿ ಸಮರ ಸಾರಿದ್ದರು. ಇದೀಗ ಪ್ರತಾಪ್ ಸಿಂಹರನ್ನು ಪಕ್ಷದ ಸಂಘಟನೆ ಗಳಲ್ಲಿ ಯಾವುದೇ ಸ್ಥಾನ ನೀಡದೇ ವಿಜಯೇಂದ್ರ ಶಾಕ್ ಕೊಟ್ಟಿದ್ದಾರೆ.