ಡಾಕಾ : ಬಾಂಗ್ಲಾದೇಶದಲ್ಲಿ ಶೇ.90ರಷ್ಟು ಮುಸ್ಲಿಮರಿದ್ದಾರೆ. ಹಾಗಾಗಿ ಸಂವಿಧಾನದಲ್ಲಿರುವ ಜಾತ್ಯತೀತ ಪದವನ್ನು ತೆಗೆದುಹಾಕಬೇಕು ಎಂದು ಬಾಂಗ್ಲಾದೇಶದ ಅಟಾರ್ನಿ ಜನರಲ್ ಅಸದುಜ್ಜಮಾನ್ ವಾದಿಸಿದ್ದಾರೆ. ಜತೆಗೆ, ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಬಂಗಾಬಂಧು ಬಿರುದನ್ನು ತೆಗೆದು ಹಾಕಬೇಕು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಸುಪ್ರೀಂಕೋರ್ಟ್ ಮುಂದೆ ತಮ್ಮ ವಾದ ಮಂಡಿಸಿದ ಅಸದುಜ್ಜಮಾನ್, ದೇಶದ ಪ್ರಜಾಪ್ರಭುತ್ವ ಮತ್ತು ಐತಿಹಾಸಿಕ ಮೌಲ್ಯಗಳೊಂದಿಗೆ ಸಂವಿಧಾನವನ್ನು ಸಮೀಕರಿಸುವ ಅಗತ್ಯವಿದೆ. “ಹಿಂದೆ, ಅಲ್ಲಾನಲ್ಲಿ ನಿರಂತರ ನಂಬಿಕೆ ಇತ್ತು ನಮಗೆ ಅದು ಮೊದಲಿನಂತೆಯೇ ಮುಂದುವರಿಯಬೇಕು. ರಾಜ್ಯವು ಎಲ್ಲಾ ಧರ್ಮಗಳ ಆಚರಣೆಯಲ್ಲಿ ಸಮಾನ ಹಕ್ಕುಗಳು ಮತ್ತು ಸಮಾನತೆಯನ್ನು ಖಾತ್ರಿಪಡಿಸುತ್ತದೆ ಎಂದು ಸಂವಿಧಾನದ 2ನೇ ಪರಿಚ್ಛೇದದಲ್ಲಿ ತಿಳಿಸಲಾಗಿದೆ ಎಂದು ಬಾಂಗ್ಲಾ ಸುಪ್ರೀಂ ಕೋರ್ಟ್ನಲ್ಲಿ ಬಾಂಗ್ಲಾ ದೇಶವನ್ನು ಇಸ್ಲಾಂ ದೇಶವಾಗಿ ಘೋಷಿಸಬೇಕು ಎಂದು ವಾದಿಸಿದ್ದಾರೆ.