ಇರಾಕ್ : ತಾಲಿಬಾನ್, ಇರಾನ್ ಸೇರಿದಂತೆ ಕೆಲವು ರಾಷ್ಟ್ರಗಳು ಮಹಿಳೆಯರ ಮೇಲೆ ಕಠಿಣ ಕಾನೂನಿನ ನಿರ್ಬಂಧಗಳನ್ನು ವಿಧಿಸುವುದನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ದೇಶ ಇಸ್ಲಾಂ ಕಾನೂನಿನ ನೆಪವೊಡ್ಡಿ ಹೆಣ್ಣು ಮಕ್ಕಳ ವಿವಾಹದ ವಯಸನ್ನು ಕೇವಲ 9 ವರ್ಷಕ್ಕೆ ಇಳಿಸಲು ಮುಂದಾಗಿದೆ.
ಹೌದು ಇರಾಕ್ ಇಂತಹ ಭಯಾನಕ ಕಾನೂನನ್ನು ರೂಪಿಸಲು ಮುಂದಾಗಿದ್ದು. ಪುರುಷರು 9 ವರ್ಷದ ಹೆಣ್ಣನ್ನು ವಿವಾಹವಾಗುವಂತೆ ಕಾನೂನು ರೂಪಿಸುತ್ತಿದೆ ಎಂದು ಮಾಹಿತಿ ದೊರೆತಿದೆ. ಇದರ ಜೊತೆಗೆ ಮಹಿಳೆಯರ ವಿಚ್ಚೇದನದ ಹಕ್ಕು, ಮಕ್ಕಳ ಪಾಲನೆಯ ಹಕ್ಕು, ಸೇರಿದಂತೆ ಉತ್ತರಾಧಿಕಾರದ ಹಕ್ಕನ್ನು ಕಸಿದುಕೊಳ್ಳುವಂತೆ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ಮಾಹಿತಿ ದೊರೆತಿದೆ.
ಕೆಲವೊಂದು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು. ಇದರ ಕುರಿತಂತೆ ವಿಶ್ವಸಂಸ್ಥೆಯಾಗಲಿ ಅಥವಾ ಮಾನವ ಹಕ್ಕುಗಳ ಆಯೋಗವಾಗಲಿ ಯಾವುದೇ ಕ್ರಮ ಕೈಗೊಳುತ್ತಿಲ್ಲ ಎಂಬುದು ನಿಜಕ್ಕು ಗಾಬರಿಯ ವಿಷಯವಾಗಿದೆ.