Friday, December 27, 2024

ದೇವೇಗೌಡರ ಬಗ್ಗೆ ಮರುಕ ವ್ಯಕ್ತಪಡಿಸಿದ ಸಚಿವ ಜಮೀರ್​ ಅಹಮದ್​

ರಾಮನಗರ : ಸಚಿವ ಜಮೀರ್ ಅಹಮ್ಮದ್ ಖಾನ್ ರಾಮನಗರದ ಹೊರವಲಯದ ಖಾಸಗಿ ಹೋಟೆಲ್​ನಲ್ಲಿ ತುರ್ತು ಸುದ್ದಿಗೊಷ್ಠಿ ನಡೆಸಿದರು. ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಸಚಿವ ಜಮೀರ್​ ಮೂರು ದಿನದಿಂದ ಚನ್ನಪಟ್ಟಣದಲ್ಲಿ ಪ್ರಚಾರ ಮಾಡ್ತಿದ್ದೀನಿ. ಯೋಗೇಶ್ವರ್ ಸಾಕಷ್ಟು ಕೆಲಸ‌ ಮಾಡಿದ್ದಾರೆ. ಕೆರೆಗಳನ್ನ ತುಂಬಿಸಿದ್ದಾರೆ ಇದರಿಂದಾಗಿ ಅವರೆ ಗೆಲ್ಲಲ್ಲಿದ್ದಾರೆ. ಇಂದು ನಡೆದ ಬಹಿರಂಗ ಸಮಾವೇಶದಲ್ಲಿ ಸಾಕಷ್ಟು ಜನ ಬಂದಿದ್ರು.ಜನರ ಉತ್ಸಾಹ ನೋಡಿದ್ರೆ ಯೋಗೆಶ್ವರ್ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.

ವಸತಿ ಸಚಿವನಾಗಿ ನಾನು ಕ್ಷೇತ್ರಕ್ಕೆ ಸಾಕಷ್ಟು ಮನೆಗಳನ್ನು ಕೊಟ್ಟಿದ್ದೇನೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದರು, ಸಿಎಂ ಕೂಡಾ ಆಗಿದ್ದರು ಆದರೆ ಕೇವಲ 631 ಮನೆಗಳನ್ನ ಮಾತ್ರ ಕೊಟ್ಟಿದ್ದಾರೆ. ಆದರೆ ನಾನು ಚನ್ನಪಟ್ಟಣಕ್ಕೆ 2800 ಮನೆಗಳನ್ನ ಕೊಟ್ಟಿದ್ದೇನೆ.  ಕುಮಾರಸ್ವಾಮಿ ಸಿಎಂ ಆಗಿದ್ರೂ ಚನ್ನಪಟ್ಟಣಕ್ಕೆ ಏನೂ‌ ಮಾಡಿಲ್ಲ ಅನ್ನೊದು ಜನರ ಅಭಿಪ್ರಾಯ. ಆದ್ದರಿಂದಲೆ ಈಗ ಬೀದಿ ಬೀದಿ ಓಡಾಡಿ ಮತ ಕೇಳ್ತಾವ್ರೆ. ಕೆಲಸ‌ ಮಾಡಿದಿದ್ರೆ ಯಾಕೆ ಈ ರೀತಿ ಓಡಾಡ್ಬೇಕಿತ್ತು ಎಂದು ಕುಮಾರಸ್ವಾಮಿ ಕಾಲೆಳೆದರು.

ಮುಂದುವರಿದು ಮಾತನಾಡಿದ ಜಮೀರ್​ ‘ಎಲ್ಲರಿಗೂ ರಾಜಕೀಯ ಗುರು ಇರ್ತಾರೆ ಅದೇ ರೀತಿ ನಾನು‌ ಕಾಂಗ್ರೆಸ್ ಸೇರಿದರು, ಇಂದಿಗೂ ನನ್ನ ರಾಜಕೀಯ ಗುರು ದೇವೇಗೌಡರು. ಕುಮಾರಸ್ವಾಮಿ ಮಗನನ್ನ ಗೆಲ್ಲಿಸಲು 92 ವಯಸ್ಸಿನ ದೇವೇಗೌಡರನ್ನ ಪ್ರಚಾರಕ್ಕೆ ಕರೆತಂದಿದ್ದಾರೆ ಇದು‌ ನೋವಿನ ಸಂಗತಿ ಎಂದು ಹೇಳಿದರು.

ದೇವೇಗೌಡರ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರು ಬರುತ್ತೆ !

ದೇವೇಗೌಡರ ಬಗ್ಗೆ ಮಾತನಾಡಿದ ಜಮೀರ್​​ ‘ದೇವೇಗೌಡರನ್ನು ನೋಡಿದರೆ ನನ್ನ ಕಣ್ಣಲ್ಲಿ ನೀರು ಬರುತ್ತೆ, ಈ‌ ವಯಸ್ಸಿನಲ್ಲಿ ಯಾರಾದ್ರೂ ಅವರನ್ನ ರಾಜಕೀಯಕ್ಕೆ ಬಳಸಿಕೊಳ್ತಾರಾ.? ನನ್ನ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದಕ್ಕೆ ನಿರಂತರವಾಗಿ ಜನ ಗೆಲ್ಲಿಸ್ತಾರೆ. ಕೆಲಸ ಮಾಡಿದ್ರೆ ಪ್ರಚಾರಕ್ಕೆ ಹೋಗದಿದ್ರೂ ಜನ ಗೆಲ್ಲಿಸ್ತಾರೆ.
ಯೋಗೇಶ್ವರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಯೂ ಗೆದ್ರು.ಕಾರಣ ಅವರು ಕೆಲಸ ಮಾಡಿದ್ರು.
ಕುಮಾರಸ್ವಾಮಿ ಕೆಲಸ ಮಾಡಿದ್ರೆ ಇಷ್ಟೊಂದು ಪ್ರಚಾರ ಮಾಡುವ ಅವಶ್ಯಕತೆ ಏನಿದೆ.? ಎಂದು ಹೇಳಿದರು.

ನಾನು ಕುಮಾರಸ್ವಾಮಿಯನ್ನು ಕರಿಯಣ್ಣ ಎಂದೇ ಕರೆಯೋದು !

ಹೆಚ್ಡಿಕೆ ವಿರುದ್ಧ ವಿವಾದಾತ್ಮಕ ಪದ ಬಳಕೆ ವಿಚಾರವಾಗಿ ಮಾತನಾಡಿದ ಜಮೀರ್​ ನಾನು ಆಗಿನಿಂದಲೂ ಕುಮಾರಸ್ವಾಮಿರನ್ನ ಕರಿಯಣ್ಣ ಅಂತಲೇ ಕರೆಯೋದು. ಅದನ್ನ ಉರ್ದುವಿನಲ್ಲಿ ಹೇಳಿದ್ದೀನಿ. ನಾನು ಮುಂಚೆಯಿಂದಲೂ ಹಾಗೆ ಕರೆಯೋದು. ಅವರು ನನ್ನನ್ನ ಕುಳ್ಖ ಅಂತಾರೆ. ನಾನು ಪ್ರೀತಿಯಿಂದ ಕರಿಯಣ್ಣ ಅಂತಲೇ ಕುಮಾರಸ್ವಾಮಿ ಅವರನ್ನ ಕರೆದಿದ್ದೇವೆ. ಅದು ಮುಂಚೆಯಿಂದ ಕರೆಯೋದೆ ಹಾಗೆ ಹಾಗಾಗಿ ಆಟೋಮಿಟಿಕ್ ಆಗಿ ಆ ಪದ ಬಂತು ಎಂದು ಹೇಳಿದರು.

RELATED ARTICLES

Related Articles

TRENDING ARTICLES