Friday, December 27, 2024

ಪುಟಿನ್-ಟ್ರಂಪ್ ಫೋನ್ ಕರೆ ಮೂಲಕ ಮಾತನಾಡಿಯೇ ಇಲ್ಲ: ಎಂದು ರಷ್ಯಾ ಸ್ಪಷ್ಟನೆ

ದೆಹಲಿ : ಉಭಯ ನಾಯಕರು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ ಎಂಬ ಯುಎಸ್ ಮಾಧ್ಯಮ ವರದಿಯನ್ನು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ ನಿರಾಕರಿಸಿದರು. ಯುಎಸ್​ ಅಧ್ಯಕ್ಷೀಯ ಚುನಾವಣೆ ಗೆದ್ದ ಬಳಿಕ ಡೊನಾಲ್ಡ್​ ಟ್ರಂಪ್​ ಹಾಗೂ ರಷ್ಯಾ ಅಧ್ಯಕ್ಷ ವಾಡ್ಲಿಮಿರ್​ ಪುಟಿನ್​ ಫೋನ್​ ಮೂಲಕ ಸಂಭಾಷಣೆ ನಡೆಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದನ್ನು ರಷ್ಯಾ ಅಲ್ಲಗಳೆದಿದೆ, ಪುಟಿನ್​-ಟ್ರಂಪ್​ ಮಾತನಾಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಉಭಯ ನಾಯಕರು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ್ದಾರೆ ಎಂಬ ಯುಎಸ್ ಮಾಧ್ಯಮ ವರದಿಯನ್ನು ರಷ್ಯಾ ವಕ್ತಾರ ಡಿಮಿಟ್ರಿ ಪೆಸ್ಕೋವ್ ನಿರಾಕರಿಸಿದರು. ಇದು “ಸಂಪೂರ್ಣವಾಗಿ ಸುಳ್ಳು” ಮತ್ತು “ಸುಳ್ಳು ಮಾಹಿತಿ” ಎಂದು ರಷ್ಯಾ ಹೇಳಿದೆ.

 

RELATED ARTICLES

Related Articles

TRENDING ARTICLES