ಬೆಂಗಳೂರು : ಇಂದು ಬೆಳಿಗ್ಗೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಜೋಡಿಕೊಲೆ ಪ್ರಕರಣದ ಆರೋಪಿ ಸುರೇಶ್ ಎಂಬಾತನನ್ನು ಬಂಧಿಸಿದ್ದ ಸುದ್ದಿಯನ್ನು ತಿಳಿಸಿದ್ದೇವು. ಆದರೆ ಇದೆ ಆರೋಪಿ ಸುಮಾರು 10 ವರ್ಷದ ಹಿಂದೆ ಜೋಡಿಕೊಲೆ ಮಾಡಿ ಜೈಲು ಸೇರಿದ್ದವನನ್ನು ಕನ್ನಡದ ನಟ ದುನಿಯಾ ವಿಜಿ ಜೈಲಿನಿಂದ ಹೊರಗೆ ಕರೆತಂದಿದ್ದರು ಎಂದು ಮಾಹಿತಿ ದೊರೆತಿದೆ.
ಬಾಗಲೂರು ಡಬಲ್ ಮರ್ಡರ್ ಆರೋಪಿ ಸುರೇಶ್ ಸೇರಿದಂತೆ 10 ವರ್ಷ ಶಿಕ್ಷೆ ಪೂರೈಸಿದ ಕೆಲ ಆರೋಪಿಗಳಿಗೆ ದುನಿಯಾ ವಿಜಯ್ ತಲಾ 3 ಲಕ್ಷ ರೂಪಾಯಿ ಶ್ಯೂರಿಟಿ ನೀಡುವ ಮೂಲಕ ಒಂದಷ್ಟು ಅಪರಾಧಿಗಳನ್ನು ಜೈಲಿನಿಂದ ಹೊರಗೆ ಕರೆತಂದಿದ್ದರು. ಇದೇ ವೇಳೆ ಡಬಲ್ ಮರ್ಡರ್ ಮತ್ತು ರೇಪ್ ಕೇಸ್ನಲ್ಲಿ ಜೈಲು ಸೇರಿದ್ದ ಸುರೇಶ್ ಕೂಡ ಜೈಲಿನಿಂದ ಹೊರಗೆ ಬಂದಿದ್ದನು.
ಜೈಲಿಂದ ಬಿಡುಗಡೆ ಬಳಿಕ ಮಾರ್ಕೆಟ್ನಲ್ಲಿ ಕೊತ್ತಮಿರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸ್ತಿದ್ದ ಸುರೇಶ್ ನಂತರ ತನ್ನ ಸಂಬಂಧಿಯಿಂದ ಶೆಡ್ ನಲ್ಲಿ ಕೆಲಸ ಪಡೆದುಕೊಂಡಿದ್ದನು. ಶೆಡ್ನಲ್ಲಿದ್ದ ಗುಜರಿ ವಸ್ತುಗಳನ್ನು ಮಾರುವ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ಸುರೇಶ್ ಮಂಜುನಾಥ್ ಮತ್ತು ನಾಗೇಶ್ ಎಂಬುವವರು ಹೀಯಾಳೀಸಿದ್ದರು ಎಂಬ ಕಾರಣಕ್ಕೆ ಕೊಲೆ ಮಾಡಿದ್ದನು.
ಇದೀಗ ಮತ್ತೆ ಸುರೇಶ ಪೋಲಿಸರ ಆಥಿತಿಯಾಗಿದ್ದಾನೆ. ಒಮ್ಮೆ ತಪ್ಪು ಮಾಡುವ ಅಪರಾಧಿಗೆ ಕ್ಷಮೆಯನ್ನು ನೀಡಬಹುದು. ಆದರೆ ತಪ್ಪಿನ ಮೇಲೆ ತಪ್ಪು ಮಾಡುವ ಅಪರಾಧಿಗೆ ಕ್ಷಮೆಗಿಂತ ಶಿಕ್ಷೆಯೆ ಉತ್ತಮ ಎಂಬುದು ಪ್ರಸ್ತುತ ಪ್ರಕರಣದಲ್ಲಿ ತಿಳಿದು ಬಂದಿದೆ.