Friday, December 27, 2024

ಆಸ್ಪತ್ರೆಯ 4 ನೇ ಮಹಡಿಯಿಂದ ಜಿಗಿದು ಬಾಣಂತಿ ಆತ್ಮಹತ್ಯೆ

ಮಂಗಳೂರು : ನಗರದ ಲೇಡಿಗೋಷನ್​ ಹೆರಿಗೆ ಆಸ್ಪತ್ರೆಯ 4ನೇ ಮಹಡಿಯಿಂದ ಬಾಣಂತಿಯೊಬ್ಬಳು ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದು. ಇಂದು ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು 29 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ.

ರಂಜಿತಾ ಅವರಿಗೆ ಅಕ್ಟೋಬರ್​​ 30ರಂದು ಅವಧಿ ಪೂರ್ವ ಪ್ರಸವವಾಗಿತ್ತು. ಇದರಿಂದಾಗಿ ವೈದ್ಯರು ಸಿಸೇರಿಯನ್​ ಮೂಲಕ ಹೆರಿಗೆ ನಡೆಸಿದ್ದರು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ನವಂಬರ್​ 3ರಂದು ಸಾವನ್ನಪ್ಪಿತ್ತು. ಇದರಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ರಂಜಿತಾ ರಕ್ತದೊತ್ತಡದಿಂದಲು ಬಳಲುತ್ತಿದ್ದರು.

ಇಂದು ರಂಜಿತಾ ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆಕೆಯನ್ನು ಕರೆದೊಯ್ಯಲು ಕುಟುಂಬಸ್ಥು ಕೂಡ ಬಂದಿದ್ದರು. ಆದರೆ ಡಿಸ್ಚಾರ್ಜ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮುನ್ನವೆ ರಂಜಿತಾ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಏಕಾಏಕಿ ಕೆಳಗೆ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾಳನ್ನು ತಕ್ಷಣವೆ ಕಾರ್ಕಳದ ಜಿಲ್ಲಾ ಸರ್ಕಾರಿ ವೆನ್ಲಾಕ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಮಹಿಳೆ ಕೊನಯುಸಿರೆಳೆದಿದ್ದಳು ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES