Friday, December 27, 2024

ಬಿಬಿಎಂಪಿ ಶಾಲೆಗಳಲ್ಲಿ ಸ್ಮಾರ್ಟ್​ಕ್ಲಾಸ್ ನಿರ್ಮಾಣಕ್ಕೆ 2 ಕೋಟಿ ಅನುದಾನ

ಬೆಂಗಳೂರು (ನ.11): ಬಿಬಿಎಂಪಿಯ ಮತ್ತಷ್ಟು ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಯೋಜನೆ ರೂಪಿಸಿದ್ದು, ಅದಕ್ಕಾಗಿ ಸುಮಾರು 2 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಬಿಬಿಎಂಪಿಯ ಶಾಲಾ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಡಿಜಿಟಲ್‌ ತಂತ್ರಜ್ಞಾನದೊಂದಿಗೆ ಕಲಿಕೆ ನೀಡುವ ಉದ್ದೇಶದಿಂದ 2020-21ನೇ ಸಾಲಿನಿಂದ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲಾಗಿದೆ. ಈಗಾಗಲೇ ಬಿಬಿಎಂಪಿಯ 10 ಶಾಲಾ ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಇದೀಗ ಇನ್ನೂ10 ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ ಯೋಜನೆ ರೂಪಿಸಲಾಗಿದೆ.

ಬಿಬಿಎಂಪಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸ್ಮಾರ್ಟ್‌ ಶಿಕ್ಷಣಕ್ಕೆ 2 ಕೋಟಿ ರು. ಮೀಸಲಿಡಲಾಗಿದ್ದು, ಆ ಪೈಕಿ ಹೊಸದಾಗಿ 10 ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸುವುದಕ್ಕೆ 1.80 ಕೋಟಿ ರು. ಉಳಿದ 20 ಲಕ್ಷ ರು. ಅನ್ನು ಈ ಹಿಂದೆ ಆರಂಭಿಸಲಾಗಿದ್ದು ಸ್ಮಾರ್ಟ್‌ ಕ್ಲಾಸ್‌ನ ದುರಸ್ಥಿ ಕಾಮಗಾರಿಗೆ ಬಳಕೆ ಮಾಡಲು ತೀರ್ಮಾನಿಸಲಾಗಿದೆ.

ಕೆಟ್ಟು ನಿಂತಿವೆ ಹಲವಾರು ಸ್ಮಾರ್ಟ ಬೋರ್ಡ್​ಗಳು

ಈ ಹಿಂದೆ ಬಿಬಿಎಂಪಿಯ 10 ಶಾಲಾ ಕಾಲೇಜುಗಳಲ್ಲಿ ಅಳವಡಿಸಲಾಗಿದ್ದ 87 ಸ್ಮಾರ್ಟ್‌ ಬೋರ್ಡ್‌ಗಳ ಪೈಕಿ 45 ಸ್ಮಾರ್ಟ್‌ ಬೋರ್ಡ್‌ ಕೆಟ್ಟು ಹೋಗಿವೆ. ಕ್ಲೀವ್ ಲ್ಯಾಂಡ್‌ ಟೌನ್‌ ಶಾಲೆಯಲ್ಲಿ ಅಳವಡಿಕೆ ಮಾಡಲಾಗಿದ್ದ 10ಕ್ಕೆ 10 ಸ್ಮಾರ್ಟ್‌ ಬೋರ್ಡ್‌ಗಳು ಕೆಟ್ಟು ಹೋಗಿವೆ. ಬೈರಸಂದ್ರ ಪ್ರೌಢ ಶಾಲೆಯ 13 ಸ್ಮಾರ್ಟ್‌ ಬೋರ್ಡ್‌ಗಳ ಪೈಕಿ 10 ಸ್ಮಾರ್ಟ್‌ ಬೋರ್ಡ್‌ ಕೆಟ್ಟಿವೆ. ಹೀಗೆ ಹಲವು ಸ್ಮಾರ್ಟ್‌ ಬೋರ್ಡ್‌ಗಳು ಮೂಲೆ ಸೇರಿವೆ.

RELATED ARTICLES

Related Articles

TRENDING ARTICLES